ಶ್ವೇತಭವನದ ಮೇಲೆ ದಾಳಿಗೆ ಪ್ರಯತ್ನ: ಭಾರತೀಯ ಮೂಲದ ವ್ಯಕ್ತಿಗೆ 8 ವರ್ಷ ಜೈಲು

ಸಾಯಿ ವರ್ಷಿತ್ ಕಂದೂಲಾ | PC : NDTV
ವಾಷಿಂಗ್ಟನ್ : ಶ್ವೇತಭವನದ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ ಭಾರತೀಯ ಮೂಲದ ಸಾಯಿ ವರ್ಷಿತ್ ಕಂದೂಲಾಗೆ ಅಮೆರಿಕದ ನ್ಯಾಯಾಲಯ 8 ವರ್ಷ ಜೈಲುಶಿಕ್ಷೆ ವಿಧಿಸಿದೆ.
2023ರ ಮೇ 22ರಂದು ಬಾಡಿಗೆಗೆ ಪಡೆದ ಟ್ರಕ್ ಅನ್ನು ಬಳಸಿ ಸಾಯಿ ವರ್ಷಿತ್ ಶ್ವೇತಭವನದ ಮೇಲೆ ದಾಳಿಗೆ ಪ್ರಯತ್ನಿಸಿದ್ದಾನೆ. ಚುನಾಯಿತ ಸರಕಾರವನ್ನು ಉರುಳಿಸಿ ನಾಝಿ ಸಿದ್ಧಾಂತದ ಸರ್ವಾಧಿಕಾರಿ ಸರಕಾರ ಸ್ಥಾಪಿಸುವ ಉದ್ದೇಶವನ್ನು ಆತ ಹೊಂದಿದ್ದ . 2024ರ ಮೇ 13ರಂದು ಕಂದೂಲಾ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಮೆರಿಕದ ನ್ಯಾಯ ಇಲಾಖೆ ಹೇಳಿದೆ. 8 ವರ್ಷದ ಜೈಲುಶಿಕ್ಷೆಯ ಜತೆಗೆ 3 ವರ್ಷಗಳ `ಮೇಲ್ವಿಚಾರಣೆ ಬಿಡುಗಡೆ' ಶಿಕ್ಷೆಯನ್ನೂ ಕಂದೂಲಾ ಅನುಭವಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ.
Next Story