ಲಿಫ್ಟ್ ನಲ್ಲಿ 3 ದಿನ ಸಿಲುಕಿದ್ದ ಮಹಿಳೆ ಮೃತ್ಯು
ಸಾಂದರ್ಭಿಕ ಚಿತ್ರ (Photo :taxreply.com)
ತಾಷ್ಕೆಂಟ್: ಬಹುಮಹಡಿ ಕಟ್ಟಡದ ಲಿಫ್ಟ್ನೊಳಗೆ 3 ದಿನ ಸಿಲುಕಿದ್ದ ಮಹಿಳೆಯೊಬ್ಬರು ಉಸಿರು ಕಟ್ಟಿ ಮೃತಪಟ್ಟ ಘಟನೆ ಉಜ್ಬೇಕಿಸ್ತಾನದ ತಾಷ್ಕೆಂಟ್ ನಗರದಲ್ಲಿ ವರದಿಯಾಗಿದೆ.
ಅಂಚೆ ಕಚೇರಿಯ ಪತ್ರ ಬಟವಾಡೆ ಮಾಡುವ ಕೆಲಸ (ಪೋಸ್ಟ್ ವುಮನ್) ಮಾಡುತ್ತಿದ್ದ 32 ವರ್ಷದ ಓಲ್ಗಾ ಲಿಯೊಂಟ್ಯೆವಾ ಎಂಬ ಮಹಿಳೆ ಕಟ್ಟಡದ 9ನೇ ಮಹಡಿಗೆ ಲಿಫ್ಟ್ ಮೂಲಕ ತೆರಳಿದ್ದಾಗ ಲಿಫ್ಟ್ ಹಾಳಾಗಿ ಅದರೊಳಗೆ ಸಿಕ್ಕಿಬಿದ್ದಿದ್ದಾರೆ.
ವಿದ್ಯುತ್ ಕಡಿತಗೊಂಡ ಕಾರಣ ಲಿಫ್ಟ್ನಲ್ಲಿನ ಫ್ಯಾನ್ ಕೂಡಾ ಸ್ಥಗಿತಗೊಂಡಿದ್ದು ಮಹಿಳೆ ಸಹಾಯಕ್ಕಾಗಿ ಎಷ್ಟು ಕಿರುಚಿದರೂ ಯಾರ ಗಮನಕ್ಕೂ ಬಂದಿರಲಿಲ್ಲ. ಮರುದಿನ ಓಲ್ಗಾಳ ಮನೆಯವರು ಆಕೆ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ತಕ್ಷಣ ಪೊಲೀಸರು ಶೋಧ ಕಾರ್ಯ ನಡೆಸಿದಾಗ ಕೆಟ್ಟುನಿಂತ ಲಿಫ್ಟ್ನಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಲಿಫ್ಟ್ನಲ್ಲಿನ ತಾಂತ್ರಿಕ ದೋಷ ಈ ದುರಂತಕ್ಕೆ ಕಾರಣವಾಗಿರುವುದು ಪ್ರಾಥಮಿಕ ತನಿಖೆಯಿಂದ ಸ್ಪಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Next Story