ವಿಶ್ವದ ಪ್ರಪ್ರಥಮ ಹಾರುವ ಕಾರು ಅನಾವರಣ
Photo: twitter/LauraHardyRadio
ನ್ಯೂಯಾರ್ಕ್: ಅಮೆರಿಕದ ಡೆಟ್ರಾಯ್ಟ್ನಲ್ಲಿ ನಡೆದ ‘ಆಟೋ ಶೋ'ನಲ್ಲಿ ವಿಶ್ವದ ಪ್ರಪ್ರಥಮ ಹಾರುವ ಕಾರನ್ನು ಅನಾವರಣ ಮಾಡಲಾಗಿದೆ.
ಅಲೆಫ್ ಏರೊನಾಟಿಕ್ಸ್ ಸಂಸ್ಥೆ ಉತ್ಪಾದಿಸುವ ಕಾರಿನ ಮಾದರಿಯನ್ನು ಜಗತ್ತಿನೆದುರು ಪ್ರದರ್ಶಿಸಲಾಗಿದ್ದು, ಈ ಕಾರು ಜೂನ್ನಲ್ಲಿ ಕಾನೂನು ಅನುಮೋದನೆ ಪಡೆದಿದೆ. ಇಬ್ಬರು ಪ್ರಯಾಣಿಸಬಹುದಾದ ಇಲೆಕ್ಟ್ರಿಕ್ ಕಾರು ಇದಾಗಿದ್ದು, ಸುಮಾರು 2.46 ಕೋಟಿ ರೂ. ದರವಿದೆ ಮತ್ತು ಪೂರ್ಣವಾಗಿ ಚಾರ್ಜ್ ಮಾಡಿದರೆ 110 ಮೈಲುಗಳಷ್ಟು ದೂರವನ್ನು ಹಾರಿಕೊಂಡು ಕ್ರಮಿಸುತ್ತದೆ. ಕಾರು ಹಾರುತ್ತಿದ್ದಾಗಲೂ ಚಾಲಕ ಸ್ಥಿರತೆ ಕಾಯ್ದುಕೊಳ್ಳುವ ರೀತಿಯಲ್ಲಿ ಕಾರಿನ ಕ್ಯಾಬಿನ್ ಅನ್ನು ವಿನ್ಯಾಸಗೊಳಿಸಲಾಗಿದ್ದು ಪ್ರಯಾಣಿಕರು 180 ಡಿಗ್ರಿ ವೀಕ್ಷಣೆಯನ್ನು ಆನಂದಿಸಲು ಸಾಧ್ಯವಾಗುತ್ತದೆ ಎಂದು ಸಂಸ್ಥೆ ಹೇಳಿದೆ.
ರಸ್ತೆಯ ಮೇಲೆ ಚಲಿಸುವ ಅಥವಾ ಆಗಸದಲ್ಲಿ ಹಾರುವ ಸಾಮಥ್ರ್ಯದ ಕಾರುಗಳನ್ನು ತಯಾರಿಸುವ ಉದ್ದೇಶವಿದೆ. ಈಗಾಗಲೇ 500ಕ್ಕೂ ಹೆಚ್ಚು ಬುಕಿಂಗ್ ನಡೆದಿದೆ ಎಂದು ಸಂಸ್ಥೆಯ ಸಿಇಒ ಜಿಮ್ ಡ್ಯುಕೊವ್ನಿ ಹೇಳಿದ್ದಾರೆ.