ಯೆಮನ್, ಜಿಬೌಟಿ ಬಳಿ ವಲಸಿಗರ ದೋಣಿ ಮುಳುಗಿ ಕನಿಷ್ಟ 2 ಸಾವು

ಸಾಂದರ್ಭಿಕ ಚಿತ್ರ
ಸನಾ,: ಯೆಮನ್ ಮತ್ತು ಜಿಬೌಟಿ ಬಳಿ ಸಮುದ್ರದಲ್ಲಿ ನಡೆದ ಪ್ರತ್ಯೇಕ 4 ದುರ್ಘಟನೆಗಳಲ್ಲಿ ವಲಸಿಗರ ದೋಣಿಗಳು ಮುಳುಗಿ ಕನಿಷ್ಟ ಇಬ್ಬರು ಸಾವನ್ನಪ್ಪಿದ್ದು 186 ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಗುರುವಾರ ಯೆಮನ್ ಬಳಿಯ ಸಮುದ್ರದಲ್ಲಿ ಎರಡು ದೋಣಿಗಳು ಮುಳುಗಿದ್ದು 181 ವಲಸಿಗರು ಹಾಗೂ ಐವರು ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ. ಇಬ್ಬರು ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ ಎಂದು ವಲಸೆಗಾಗಿ ಅಂತರಾಷ್ಟ್ರೀಯ ಸಂಸ್ಥೆಯ ವಕ್ತಾರರನ್ನು ಉಲ್ಲೇಖಿಸಿ `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.
ಗುರುವಾರ ಆಫ್ರಿಕಾದ ಜಿಬೌಟಿ ದೇಶದ ಧುಬಾಬ್ ಜಿಲ್ಲೆಯ ಕರಾವಳಿಯ ಬಳಿ ಎರಡು ದೋಣಿಗಳು ಮುಳುಗಿದೆ. ಒಂದು ದೋಣಿಯಲ್ಲಿ ಇಥಿಯೋಪಿಯಾದ 31 ವಲಸಿಗರು ಹಾಗೂ ಮೂವರು ಸಿಬ್ಬಂದಿಗಳಿದ್ದು 32 ಮಂದಿಯನ್ನು ರಕ್ಷಿಸಲಾಗಿದ್ದು ಇಬ್ಬರು ವಲಸಿಗರ ಮೃತದೇಹ ಪತ್ತೆಯಾಗಿದೆ. ಮತ್ತೊಂದು ದೋಣಿಯಲ್ಲಿ 150 ವಲಸಿಗರು ಹಾಗೂ 4 ಸಿಬ್ಬಂದಿಗಳಿದ್ದು ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ವರದಿ ಹೇಳಿದೆ.
Next Story