ಬಾಂಗ್ಲಾದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಯೂನಸ್ ಬದ್ಧ : ಅಮೆರಿಕ
ಮುಹಮ್ಮದ್ ಯೂನಸ್ | PC : PTI
ವಾಷಿಂಗ್ಟನ್ : ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ಹೆಚ್ಚುತ್ತಿರುವ ವರದಿಗಳ ನಡುವೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
`ಧರ್ಮವನ್ನು ಲೆಕ್ಕಿಸದೆ ಎಲ್ಲಾ ಜನರ ಮಾನವ ಹಕ್ಕುಗಳನ್ನು ಗೌರವಿಸಲು ಮತ್ತು ರಕ್ಷಿಸಲು ಇಬ್ಬರೂ ನಾಯಕರು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು. ಸಮೃದ್ಧ, ಸ್ಥಿರ ಮತ್ತು ಪ್ರಜಾಪ್ರಭುತ್ವ ಬಾಂಗ್ಲಾದೇಶಕ್ಕಾಗಿ ಅಮೆರಿಕದ ಬೆಂಬಲವನ್ನು ಸುಲ್ಲಿವಾನ್ ಪುನರುಚ್ಚರಿಸಿದರು ಮತ್ತು ಬಾಂಗ್ಲಾದೇಶ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಅಮೆರಿಕದ ನಿರಂತರ ಬೆಂಬಲದ ಭರವಸೆ ನೀಡಿದರು' ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದಾಳಿ, ಹತ್ಯೆ ಹಾಗೂ ಹಿಂದು ದೇವಸ್ಥಾನಗಳಿಗೆ ಹಾನಿಯ ಘಟನೆ ಹೆಚ್ಚುತ್ತಿರುವ ಬಗ್ಗೆ ಅಮೆರಿಕದ ಡೆಮಾಕ್ರಟಿಕ್ ಸಂಸದ ಥಾಣೆದಾರ್ ಕಳವಳ ವ್ಯಕ್ತಪಡಿಸಿದ್ದರು ಮತ್ತು ಈ ಕುರಿತು ಬಾಂಗ್ಲಾ ಸರಕಾರದ ಜತೆ ಮಾತುಕತೆ ನಡೆಸುವಂತೆ ಸರಕಾರವನ್ನು ಆಗ್ರಹಿಸಿದ್ದರು.
` ಶಾಂತಿಯನ್ನು ಮರುಸ್ಥಾಪಿಸುವ ಮತ್ತು ಸಮಾನತೆ ಹಾಗೂ ನ್ಯಾಯದ ತತ್ವಗಳ ಮೇಲೆ ರಾಷ್ಟ್ರವನ್ನು ಪುನನಿರ್ಮಿಸುವ ಭರವಸೆಯನ್ನು ಈಡೇರಿಸುವಂತೆ ಮುಹಮ್ಮದ್ ಯೂನಿಸ್ರನ್ನು ಒತ್ತಾಯಿಸುವಂತೆ ಥಾಣೆದಾರ್ ಆಗ್ರಹಿಸಿದ್ದರು.