ವಿಶ್ವಸಂಸ್ಥೆ ಶಾಲೆ ಮೇಲೆ ಇಸ್ರೇಲ್ ದಾಳಿ: ಕನಿಷ್ಠ 50 ಮಂದಿ ಮೃತ್ಯು
Photo: twitter.com/QNAEnglish
ಗಾಝಾ: ಗಾಝಾ ಪಟ್ಟಿಯಲ್ಲಿ ಜಬಾಲಿಯಾ ಶಿಬಿರದ ಮೇಲೆ ಇಸ್ರೇಲ್ ಶನಿವಾರ ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 80 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಅಧಿಕಾರಿಗಳು ಹೇಳಿದ್ದಾರೆ.: ಪಟ್ಟಿಯಲ್ಲಿ ಜಬಾಲಿಯಾ ಶಿಬಿರದ ಮೇಲೆ ಇಸ್ರೇಲ್ ಶನಿವಾರ ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 80 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಅಧಿಕಾರಿಗಳು ಹೇಳಿದ್ದಾರೆ.
ವಿಶ್ವಸಂಸ್ಥೆ ನಡೆಸುವ ಅಲ್-ಫಕೂರಾ ಶಾಲೆ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 50 ಮಂದಿ ಮೃತಪಟ್ಟಿದ್ದಾರೆ. ಈ ಶಾಲೆಯನ್ನು ಸ್ಥಳಾಂತರಗೊಂಡ ಪ್ಯಾಲೆಸ್ತೀನಿಯನ್ನರ ತಾತ್ಕಾಲಿಕ ಶಿಬಿರವನ್ನಾಗಿ ಪರಿವರ್ತಿಸಲಾಗಿತ್ತು ಎಂದು ಹೇಳಲಾಗಿದೆ. ಮತ್ತೊಂದು ಕಟ್ಟಡದ ಮೇಲೆ ನಡೆದ ಪ್ರತ್ಯೇಕ ದಾಳಿಯಲ್ಲಿ ಒಂದೇ ಕುಟುಂಬದ 32 ಮಂದಿ ಹತ್ಯೆಗೀಡಾಗಿದ್ದು ಇವರಲ್ಲಿ 19 ಮಂದಿ ಮಕ್ಕಳು ಸೇರಿದ್ದಾರೆ.
ಈ ದಾಳಿಗಳ ಬಗ್ಗೆ ಇಸ್ರೇಲಿ ಸೇನೆ ಯಾವುದೇ ನಿರ್ದಿಷ್ಟ ಹೇಳಿಕೆ ನೀಡಿಲ್ಲ. ಆದರೆ ಗಾಝಾದಲ್ಲಿ ಅದರಲ್ಲೂ ಪ್ರಮುಖವಾಗಿ ಜಬಾಲಿಯಾ ಪ್ರದೇಶದಲ್ಲಿ ಹಮಾಸ್ ಮೂಲಸೌಕರ್ಯದ ಮೇಲೆ ದಾಳಿ ಕಾರ್ಯಾಚರಣೆ ತೀವ್ರಗೊಳಿಸಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
32 ಜೀವಗಳನ್ನು ಬಲಿ ಪಡೆದ ದಕ್ಷಿಣ ಗಾಜಾ ದಾಳಿಯ ಬೆನ್ನಲ್ಲೇ ಇಸ್ರೇಲ್ ಎಚ್ಚರಿಕೆ ನೀಡಿ, ಉತ್ತರ ಭಾಗದಿಂದ ಹಮಾಸ್ ಹೋರಾಟಗಾರರನ್ನು ನಿರ್ಮೂಲನೆ ಮಾಡಿದ ಬಳಿಕ ದಕ್ಷಿಣ ಭಾಗದಲ್ಲಿ ಹಮಾಸ್ ಹೋರಾಟಗಾರರ ವಿರುದ್ಧದ ಕಾರ್ಯಾಚರಣೆ ನಡೆಯುತ್ತಿದ್ದು ನಾಗರಿಕರು ಸ್ಥಳಾಂತರಗೊಳ್ಳಬೇಕು ಎಂದು ಸೂಚಿಸಿದೆ. ಇಸ್ರೇಲ್ ದಾಳಿಯ ಹಿನ್ನೆಲೆಯಲ್ಲಿ ಉತ್ತರ ಭಾಗದಿಂದ ದಕ್ಷಿಣಕ್ಕೆ ವಲಸೆ ಬಂದಿದ್ದ ಸಾವಿರಾರು ನಾಗರಿಕರು ಇದೀಗ ಮತ್ತೆ ಉತ್ತರಕ್ಕೆ ತೆರಳುವುದು ಅನಿವಾರ್ಯವಾಗಿದೆ. ಸುಮಾರು 4 ಲಕ್ಷ ಜನಸಂಖ್ಯೆ ಹೊಂದಿರುವ ಖಾನ್ ಯೂನಸ್ನಲ್ಲಿ ಪರಿಸ್ಥಿತಿ ಹದಗೆಡುತ್ತಿದೆ.