ಮುಸ್ಲಿಂ ಸಮುದಾಯದ ಶಿಕ್ಷಕಿ ಫಾತೀಮಾ ಶೇಖ್ ಕಾರ್ಯ ಅನನ್ಯ: ಮಾರುತಿ ಗಂಜಗಿರಿ
ಕಲಬುರಗಿ: ಶಿಕ್ಷಣದಿಂದ ವಂಚಿತರಾದ ಕೆಳಸ್ತರದ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಭಾರತ ದೇಶದಲ್ಲಿ ಮಹಿಳೆಯರ ಘನತೆ ಎತ್ತಿಹಿಡಿದ ಮುಸ್ಲಿಂ ಸಮುದಾಯದ ಪ್ರಥಮ ಮಹಿಳಾ ಶಿಕ್ಷಕಿಯಾದ ಫಾತೀಮಾ ಶೇಖ್ ರವರ ಕಾರ್ಯ ಅನನ್ಯವಾಗಿದೆಯೆಂದು ಸಾಮಾಜಿಕ ಹೋರಾಟಗಾರ ಮಾರುತಿ ಗಂಜಗಿರಿ ಹೇಳಿದರು.
ಚಿಂಚೋಳಿ ತಾಲೂಕಿನ ಚಂದಾಪುರ ಪಟ್ಟಣದ ಮೌಲಾನಾ ಆಜಾದ್ ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಫಾತೀಮಾ ಶೇಖ್ ರವರ 194ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮುಂದುವರೆದು, ಸರ್ಕಾರಗಳು ಪ್ರಸ್ತುತ ದಿನಮಾನಗಳಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಫಾತೀಮಾ ಶೇಖ್ ರವರ ಬಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತಿಳಿಸಿ ಕೊಡುವ ಕೆಲಸ ಮಾಡಬೇಕು, ಇವರ ಇತಿಹಾಸ ಅಧ್ಯಯನ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಮಾನಸಿಕ ಬಲ ದೈಹಿಕ ಬಲ ಹೆಚ್ಚಾಗುತ್ತದೆ ಎಂದರು.
ನಿವೃತ್ತ ಮುಖ್ಯಗುರುಗಳಾದ ಮಹ್ಮದ ಪಾರುಖ್ ಸಿರಾಜ್ಜೊದ್ದಿನ್ ಕುಪನೂರ, ಅಮರ ಲೊಡ್ಡನೂರ, ಸಾಗರ ಆನಂದಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಘಾಳಪ್ಪ ಕುಂಬಾರ, ಚೇತನ ಸುಲೇಪೇಟ, ಸಿದ್ದು ರಂಗನೂರ ಇದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರುಗಳಾದ ಮಹ್ಮದ್ ಜಲೀಲ ವಹಿಸಿದ್ದರು.