ಚಿಂಚೋಳಿ | ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಿಸಿದ ಶಿಕ್ಷಕಿ
ಚಿಂಚೋಳಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು, ಎಲ್ಲಾ ಮಕ್ಕಳು ಸಮವಸ್ತ್ರ ಧರಿಸಬೇಕು ಎನ್ನುವ ಉದ್ದೇಶದಿಂದ ತಾಲೂಕಿನ ಚಿಮ್ಮನಚೋಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯೊಬ್ಬರು ಸ್ವಂತ ಖರ್ಚಿನಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿ ಮಾದರಿಯಾಗಿದ್ದಾರೆ.
ಶಾಲೆಯ ಸಹ ಶಿಕ್ಷಕಿ ಜ್ಞಾನೇಶ್ವರಿ ಮಲ್ಲಿಕಾರ್ಜುನ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಎಲ್.ಕೆ.ಜಿ ಹಾಗೂ ಯುಕೆಜಿಗೆ ದಾಖಲಾತಿ ಪಡೆದ 35 ಮಕ್ಕಳಿಗೆ ಕ್ಷೇತ್ರ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ (ಇಸಿಓ) ಅಶೋಕ ಹೂವಿನಭಾವಿ, ಸಿಆರ್ ಪಿ ಕೃಷ್ಣಪ್ಪ ರಾಥೋಡ್ ಅವರ ಸಮ್ಮುಖದಲ್ಲಿ ಉಚಿತವಾಗಿ ಸಮವಸ್ತ್ರ ವಿತರಣೆ ಮಾಡಿದರು.
ಸಹ ಶಿಕ್ಷಕಿ ಜ್ಞಾನೇಶ್ವರಿ ಕಾರ್ಯ ಶ್ಲಾಘನೀಯವಾಗಿದ್ದು, ಇವರ ಈ ಕೆಲಸ ಇತರರಿಗೂ ಮಾದರಿಯಾಗಲಿ ಎಂದು ಪ್ರಭಾರಿ ಮುಖ್ಯಶಿಕ್ಷಕ ಹೈದರ್ ಅಲಿ ತಾಜಲಾಪೂರ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಗನ್ನಾಥರೆಡ್ಡಿ ರಂಜೋಳ, ವಲಯ ಸಹಶಿಕ್ಷಕಿ ಚಂದ್ರಕಲಾ.ಪಿ.ರೆಡ್ಡಿ, ರಂಜೀತಾ ಶಿಂಧೆ, ವಿಜಯಲಕ್ಷ್ಮೀ, ಜ್ಯೋತಿ, ವಿಶಾಲಾಕ್ಷಿ, ಗಂಗಮ್ಮ, ಮಹಾನಂದಾ, ಪ್ರೇಮಾ, ಆಕಾಶ್, ಜಾಫರ್, ಮಂಗಲಾ, ವಾಣಿಶ್ರೀ ಉಪಸ್ಥಿತರಿದ್ದರು.