ಕಲಬುರಗಿ ನ್ಯಾಯಮಂಡಳಿಯ ಅಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್ ಗೊಲಾ ನೇಮಕ

ಕಲಬುರಗಿ : 2025-27ನೇ ಸಾಲಿನ ಉಚ್ಚ ಮತ್ತು ಜಿಲ್ಲಾ ನ್ಯಾಯಲಯದ ನ್ಯಾಯಮಂಡಳಿಯ ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಅಬ್ದುಲ್ ಜಬ್ಬಾರ್ ಗೊಲಾ ಸೇರಿದಂತೆ ಮೂವರು ಸದಸ್ಯರನ್ನು ಕಲಬುರಗಿ ಬಾರ್ ಅಸೋಸಿಯೇಷನ್ ಸದಸ್ಯ ಹಾಗೂ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಕಲಬುರಗಿ ವಕೀಲರ ಸಂಘದ ಗೌರವಿತ ಸದಸ್ಯರಾದ 2025-27ನೇ ಸಾಲಿನ ನ್ಯಾಯಮಂಡಳಿಯ ಚುನಾವಣೆಯ ಚುನಾವಣಾಧಿಕಾರಿಗಳಾದ ಅನ್ವೀರಪ್ಪ ಆರ್.ಹಂಡಿ ಮತ್ತು ಮಹಾಂತೇಶ್ ಮಂಡೇವಾಲ್ ಶುಕ್ರವಾರ ವಾರ್ಷಿಕ ಸಭೆ ನಡೆಸಿ ನೇಮಕ ಮಾಡಿದ್ದಾರೆ.
ಹಿರಿಯ ನ್ಯಾಯವಾದಿ ಅಬ್ದುಲ್ ಜಬ್ಬಾರ್ ಗೊಲಾ ಅವರನ್ನು ನ್ಯಾಯಾಧಿಕರಣದ ಅಧ್ಯಕ್ಷರಾಗಿ ಮತ್ತು ನ್ಯಾಯಾಧಿಕರಣದ ಸದಸ್ಯರಾಗಿ ಹಿರಿಯ ವಕೀಲರಾದ ಬಿ.ಎಂ ಕಿನಿಕೇರಿ, ಸೋನಕಾಂಬಳೆಗೆ ಸದಸ್ಯರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಗುಪ್ತಲಿಂಗ್ ಎಸ್ ಪಾಟೀಲ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
Next Story