ಕಲಬುರಗಿ | ಬೈಕ್-ಬೊಲೆರೊ ನಡುವೆ ಢಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

ಕಲಬುರಗಿ: ಬೈಕ್‌ಗೆ ಬೊಲೆರೊ ವಾಹನ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಮಲಾಪುರ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಸಮೀಪ ಬುಧವಾರ ನಡೆದಿದೆ.
ಮೃತ ಸವಾರನ್ನು ಬಾಚನಾಳ ಸುಳಗುತ್ತಿ ತಾಂಡಾದ ನಿವಾಸಿ ರಾಜು ಮೋನು ಚೌವಾಣ (38) ಎಂದು ಗುರುತಿಸಲಾಗಿದೆ.
ಕಮಲಾಪುರದ ಕಡೆ ತೆರಳುತ್ತಿದ್ದ ಬೊಲೆರೊ ವಾಹನದ ಟೈರ್ ಸ್ಪೋಟವಾಗಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಢಿಕ್ಕಿಯಾಗಿದೆ ಎನ್ನಲಾಗಿದೆ. ಪರಿಣಾಮ ಬೈಕ್ ಸವಾರ ರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕಮಲಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Next Story