ಆಳಂದ | ಆತ್ಮಹತ್ಯೆಗೈದ ರೈತನ ಸಾಲ ಮನ್ನಾ ಮಾಡುವಂತೆ ಆಗ್ರಹ
ಕಲಬುರಗಿ : ಇತ್ತೀಚೆಗೆ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ರೈತ ಭೀಮರಾವ್ ಪ್ರಭು ಅವರು ಕೃಷಿಗಾಗಿ ಮಾಡಿರುವ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘಟನೆ ವತಿಯಿಂದ ಆಳಂದ್ ಬಸ್ ಸ್ಟ್ಯಾಂಡ್ ಎದುರು ಪ್ರತಿಭಟನೆ ನಡೆಸಲಾಯಿತು.
ಮೃತ ಭೀಮರಾವ್ ಪ್ರಭು ಸಲಗರೆ ಅವರು ಮಾಡಿಕೊಂಡಿರುವ ಕೃಷಿ ಸಾಲವನ್ನು ಮನ್ನಾ ಮಾಡಬೇಕು, ಸಂಕಷ್ಟದಲ್ಲಿರುವ ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ನೌಕರಿ ಕೊಡಿಸಬೇಕು ಎಂದು ಪ್ರತಿಭಟನಾನಿರತರು ಘೋಷಣೆ ಕೂಗಿ ಆಗ್ರಹಿಸಿದರು.
ಬೆಳೆ ನಷ್ಟಕ್ಕೆ ರೈತರು ಬೀದಿಪಾಲಾಗಿದ್ದಾರೆ, ಭೀಮರಾವ್ ರಂತಹ ರೈತರು ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ, ಸರಕಾರಗಳು ಶೀಘ್ರದಲ್ಲೇ ಅವರ ರೈತಪರ ನೀತಿಗಳನ್ನು ಜಾರಿ ತರಬೇಕು, ಈವರೆಗೆ ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಬೇಕೆಂದು ಹೋರಾಟಗಾರರು ಆಗ್ರಹ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಾಂಡುರಂಗ ಮಾವೀನಕರ್, ಲವಿತ್ರ ವಸ್ತ್ರದ, ಪ್ರಕಾಶ್ ಜಾನೆ, ಸಲ್ಮಾನ್ ಖಾನ್ ನಗರ, ಪ್ರಮೋದ್ ಪಾಂಚಾಳ, ರೂಪಾ ನಡಗೇರಿ, ಇಂದುಮತಿ ದೇಗಾವ್, ಮಲ್ಲಮ್ಮ ಜಿಡಗಾ ಮತ್ತಿತರರು ಇದ್ದರು.