ಕಲಬುರಗಿ: ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ

ಕಲಬುರಗಿ: ನೇರ, ನಿಷ್ಠುರ, ನಡೆ, ನುಡಿಗಳಿಂದ ಸಮಾಜದಲ್ಲಿನ ಮೂಢನಂಬಿಕೆಯನ್ನು ಹೊಗಲಾಡಿಸಲು ಶ್ರಮಿಸಿದ ಮಹಾನ್ ವಚನಗಾರ ನಿಜಶರಣ ಅಂಬಿಗರ ಚೌಡಯ್ಯ ಎಂದು ತೊನಸನಹಳ್ಳಿ(ಎಸ್) ಗ್ರಾಪಂ ಸದಸ್ಯ ಬೆಳ್ಳಪ್ಪ ಖಣದಾಳ ಅಭಿಪ್ರಾಯಪಟ್ಟರು.
ಅವರು ಶಹಾಬಾದ ತಾಲೂಕಿನ ಅಲ್ದಿಹಾಳ ಗ್ರಾಮದಲ್ಲಿ ಕೋಲಿ ಸಮಾಜದ ವತಿಯಿಂದ ಆಯೋಜಿಸಲಾದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
12ನೇ ಶತಮಾನದ ಶರಣರ ಸಮಕಾಲಿನಲ್ಲಿ ಬಸವಣ್ಣನವರ ಅನುಯಾಯಿಯಾಗಿ ಸಾಮಾಜಿಕ ಅಸಮಾನತೆ ವಿರುದ್ಧ ಕ್ರಾಂತಿಯ ಚಳುವಳಿ ಸಾರಿದರು. ಅವರು ತಮ್ಮ ವಚನಗಳಲ್ಲಿ ಸಮಾಜದ ಅಂಕು ಡೊಂಕುಗಳ ವಿರುದ್ಧ ಕಟುವಾಗಿ ಟೀಕಿಸಿದರೂ, ಅವರ ಮಾತುಗಳಲ್ಲಿ ಸಾಮಾಜಿಕ ಕಾಳಜಿ ಕಾಣುತ್ತಿತ್ತು.ಅವರ ವಚನಗಳಲ್ಲಿನ ಭಾವ ಅನ್ಯಾಯ ಮತ್ತು ಅಸಮಾನತೆಯ ವಿರುದ್ಧ ಕಟುವಾಗಿ ಟೀಕಿಸುತ್ತಿದ್ದರು ಇಂತಹ ನಿಜಶರಣ ಅಂಬಿಗರ ಚೌಡಯ್ಯ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆದಾಗ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕೋಲಿ ಸಮಾಜದ ಮುಖಂಡ ನಾಗರಾಜ ಕರದಳ್ಳಿ ಮಾತನಾಡಿ, ಅಂಬಿಗರ ಚೌಡಯ್ಯನವರು ಕೇವಲ ಒದು ಜಾತಿಗೆ ಸೀಮಿತವಾದವರಲ್ಲ. ಇಡೀ ಮನುಕುಲಕ್ಕೆ ಮಾದರಿಯಾಗಿದ್ದಾರೆ. ಇಂತಹವರ ವಿಚಾರಧಾರೆಗಳನ್ನು ಯುವಕರಿಗೆ ಮುಟ್ಟಿಸುವ ಕಾರ್ಯವನ್ನು ಎಲ್ಲರೂ ಕೈಗೊಳ್ಳಬೇಕಿದೆ.ಯಾರಿಗೂ ಹೆದರದೆ, ಅಳುಕದೇ ಸಮಾಜದ ಅಂಕುಡೊoಕುಗಳನ್ನು ತಿದ್ದಿದವರು ಕಾಯಕ ನಿಷ್ಠೆ ಉಳ್ಳವರು, ಹಸಿದವರಿಗೆ ಅನ್ನ ಕೊಡಿ, ದುಖಃದಲ್ಲಿದ್ದವರಿಗೆ ಸಾಂತ್ವಾನ ಹೇಳಿ, ಕಷ್ಟದಲ್ಲಿದ್ದವರಿಗೆ ಸಹಾಯಮಾಡಿ ಎಂದು ತಮ್ಮ ವಚನದ ಮೂಲಕ ಜಗತ್ತಿಗೆ ಸಾರಿದವರು ಚೌಡಯ್ಯನವರು ಎಂದರು.
ಈ ಸಂದರ್ಭದಲ್ಲಿ ರಾಜು ಪೂಜಾರಿ ಪೂಜ್ಯರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಗ್ರಾಮ ಪಂಚಾಯತಿ ಸದಸ್ಯ ಖಾಲಿದ ಪಾಷಾ ಇವಣಿಕರ್, ಅಥಿಕ ಪಟೇಲ, ವಿಜಯಕುಮಾರ ಪೊಲೀಸ ಪಾಟೀಲ,ಶಿವಕುಮಾರ .ಹೆಚ್. ತಳವಾರ, ಕಾಮಣ್ಣ .ಡಿ. ಮುಗುಳನಾಗಾವ, ಸೈದಪ್ಪ ನಾಯ್ಕೋಡಿ, ಲಕ್ಷ್ಮಣ ಕಲಬುರ್ಗಿ, ಸಂತೋಷ ಗುಡೂರು, ನಾಗರಾಜ ಜೀವಣಗಿ, ಲಕ್ಷ್ಮಣ ನಾಯ್ಕೋಡಿ, ರೇವಣಸಿದ್ದಪ್ಪ ಹೆಚ್.ಬೆಂಕಿ ಇತರರು ಇದ್ದರು.