ಎಸ್.ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ʼಡೆಂಟಲ್ ಇಂಪ್ಲಾಂಟಾಲಜಿ ಕುರಿತು ಸಿಡಿಇ ಕಾರ್ಯಾಗಾರʼ

ಕಲಬುರಗಿ : ಎಚ್.ಕೆ.ಇ ಸಂಸ್ಥೆಯ ಎಸ್.ನಿಜಲಿಂಗಪ್ಪ ದಂತ ಮಹಾವಿದ್ಯಾಲಯದಲ್ಲಿ ಇನ್ಸಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಅಂಡ್ ರಿಸರ್ಚ್ ಪೀರಿಯಡಾಂಟಾಲಜಿ ಮತ್ತು ಇಂಪ್ಲಾಂಟಾಲಜಿ ವಿಭಾಗವು ಕಾರ್ಟಿಕೊ-ಬೇಸಲ್ ಡೆಂಟಲ್ ಇಂಪ್ಲಾಂಟಾಲಜಿ ಕುರಿತು ನಿರಂತರ ಹಲ್ಲು ವೈದ್ಯಕೀಯ ಶಿಕ್ಷಣ (ಸಿಡಿಇ) ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಾಗಾರವನ್ನು ಎಚ್.ಕೆ.ಇ.ಯ ಡೆಂಟಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಯಶ್ರೀ ಎ.ಮುದ್ಧಾ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಾರ್ಟಿಕೊ-ಬೇಸಲ್ ಡೆಂಟಲ್ ಇಂಪ್ಲಾಂಟ್ ಗಳ ರೂಪಾಂತರಕಾರಿ ಸಾಮರ್ಥ್ಯ ಕುರಿತು ವಿವರಿಸಿದರು. ಇದು ವಿಶೇಷವಾಗಿ ಮೂಳೆ ಬೆಂಬಲ ಕಡಿಮೆ ಇರುವ ರೋಗಿಗಳಿಗೆ ತಕ್ಷಣ ಮತ್ತು ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತದೆ. ಇದನ್ನು ಆಧುನಿಕ ಹಲ್ಲು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಮಹತ್ವಪೂರ್ಣ ಪ್ರಗತಿ ಎಂದರು.
ಹೈದರಾಬಾದ್ ನ ಪ್ರಸಿದ್ಧ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸ ತಜ್ಞರಾದ ಡಾ.ಸುಮಂತ್ ಕೃಷ್ಣ ಅವರು ಕಾರ್ಟಿಕೊ-ಬೇಸಲ್ ಡೆಂಟಲ್ ಇಂಪ್ಲಾಂಟಾಲಜಿಯ ತತ್ತ್ವಗಳು ಮತ್ತು ಅನ್ವಯಗಳ ಕುರಿತು ವಿಷಯ ಮಂಡಿಸಿದರು. ಕಾರ್ಯಕ್ರಮದಲ್ಲಿ ಕಾರ್ಟಿಕೊ-ಬೇಸಲ್ ಇಂಪ್ಲಾಂಟ್ ವಿಧಾನಗಳ ಕುರಿತು ಪ್ರಾಯೋಗಿಕ ತರಬೇತಿ ಸಮಾರಂಭವೂ ಜರುಗಿತು.
ಈ ಸಮಾರಂಭದಲ್ಲಿ ದಂತ ವೈದ್ಯಕೀಯ ತಜ್ಞರು, ದಂತ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ನವನವೀನ ದಂತ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಾಯೋಗಿಕ ಪ್ರದರ್ಶನಗಳು ಪ್ರದರ್ಶನಗೊಂಡವು.
ಉಪ-ಪ್ರಾಂಶುಪಾಲರಾದ ಡಾ.ವೀರೇಂದ್ರ ಪಾಟೀಲ್, ಮುಖ್ಯ ಭಾಷಣಕಾರರಾದ ಡಾ.ಸುಮಂತ್ ಕೃಷ್ಣ, ಜಿಎಸ್ ಇಂಪ್ಲಾಂಟ್ಸ್ ಸಿಇಒ ಡಾ.ಸೇಶು, ಮತ್ತು ಪೀರಿಯಡಾಂಟಾಲಜಿ ಮತ್ತು ಇಂಪ್ಲಾಂಟಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಕರ್ ಆರ್.ದೇಸಾಯ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೀರಿಯಡಾಂಟಾಲಜಿ ಮತ್ತು ಇಂಪ್ಲಾಂಟಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಕರ್ ಆರ್.ದೇಸಾಯ್, ಡಾ.ಬಿಂದು ಎಸ್.ಪಾಟೀಲ್, ಡಾ.ಗಿರಿಜಾ ಗಿರಿ, ಡಾ.ಜ್ಯೋತಿಲಕ್ಷ್ಮೀ ಪಾಟೀಲ್, ಡಾ.ಲಕ್ಷ್ಮಿ ಮಚೇಟ್ಟಿ, ಡಾ.ತ್ರಿಜನ್ಯ ಗೌಡ ಇದ್ದರು.
ಕಲ್ಯಾಣ ಕರ್ನಾಟಕ ಪ್ರದೇಶದಾದ್ಯಂತದ 220ಕ್ಕೂ ಹೆಚ್ಚು ದಂತ ವೈದ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.