ಕಲಬುರಗಿ | ಖಜೂರಿ, ನಿಂಬರಗಾಕ್ಕೆ ಸರಕಾರಿ ಡಿಗ್ರಿ ಕಾಲೇಜು ಪ್ರಸ್ತಾವನೆ : ಬಿ.ಆರ್.ಪಾಟೀಲ್

ಕಲಬುರಗಿ : ಆಳಂದ ತಾಲ್ಲೂಕಿನಲ್ಲಿ ಪದವಿ ಶಿಕ್ಷಣದ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ಹೋಬಳಿ ಕೇಂದ್ರ ನಿಂಬರಗಾ ಮತ್ತು ಖಜೂರಿಯಲ್ಲಿ ಸರಕಾರಿ ಡಿಗ್ರಿ ಕಾಲೇಜು ಸ್ಥಾಪನೆ ಉದ್ದೇಶವ ವಿಟ್ಟು ಪ್ರಸ್ತಾವನೆ ಕೋರಲಾಗಿದೆ ಎಂದು ಮುಖ್ಯಮಂತ್ರಿಗಳ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ್ ಅವರು ಹೇಳಿದರು.
ಆಳಂದ ತಾಲ್ಲೂಕಿನ ಖಜೂರಿ ಗ್ರಾಮದಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಗ್ರಾಮಸ್ಥರು ಬೇಡಿಕೆ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ವಾತಾವರಣ ನಿರ್ಮಿಸಲಾಗುತ್ತಿದೆ. ಅಗತ್ಯವಿದ್ದ ಕಡೆ, ಪ್ರೌಢಶಾಲೆ, ಪಿಯು ಕಾಲೇಜುಗಳನ್ನು ಅನುಮತಿ ತರಲಾಗಿದೆ. ಈಗಾಗಲೇ ಖಜೂರಿ ಗ್ರಾಮದಲ್ಲಿ ಇಂಧಿರಾಗಾoಧಿ ವಸತಿ ಶಾಲೆ ಪಿಯುಸಿವರೆಗೆ ಮೇಲ್ದರ್ಜೆಗೇರಿಸುವ ಕುರಿತು ಸಂಬoಧಿತ ಅಧಿಕಾರಿಗಳಿಗೆ ಚರ್ಚಿಸಿ ಸೂಚಿಸಲಾಗಿದೆ. ಗ್ರಾಮ ಪಟ್ಟದಲ್ಲೇ ಪದವಿ ಹಂತದ ಶಿಕ್ಷಣ ದೊರೆಕಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಈಗಾಗಲೇ ಪಿಯು ಕಾಲೇಜು ಆರಂಭಿಸಿದ್ದು, ವಿದ್ಯಾರ್ಥಿಗಳ ಸಂಖ್ಯೆ ಇದೆ. ಇನ್ನೂ ಶೈಕ್ಷಣಿಕ ಸೌಲಭ್ಯ ಕಲ್ಪಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಹಿರಿಯ ಮುಖಂಡ ಭೀಮರಾವ್ ಢಗೆ, ಡಿಸಿಸಿ ನಿರ್ದೇಶಕ ಅಶೋಕ ಸಾವಳೇಶ್ವರ, ಶಿವಲಿಂಗಪ್ಪ ಬಂಗರಗೆ ಮತ್ತಿತರರು ಇದ್ದರು.