Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕಲಬುರಗಿ
  4. ನಿರುದ್ಯೋಗ ಸಮಸ್ಯೆ ನಿವಾರಣೆಗೆ ರಾಜ್ಯ...

ನಿರುದ್ಯೋಗ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಪಣ: ಡಾ.ಶರಣಪ್ರಕಾಶ ಪಾಟೀಲ್

ಕಲಬುರಗಿಯಲ್ಲಿ ವಿಭಾಗ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜನೆ

ವಾರ್ತಾಭಾರತಿವಾರ್ತಾಭಾರತಿ13 April 2025 9:28 PM IST
share
ನಿರುದ್ಯೋಗ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಪಣ: ಡಾ.ಶರಣಪ್ರಕಾಶ ಪಾಟೀಲ್

ಕಲಬುರಗಿ: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಷಿದ್ದು, ಕರ್ನಾಟಕದಲ್ಲಿ ತಕ್ಕಮಟ್ಟಿಗೆ ಇದನ್ನು ನಿವಾರಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯು ನಿರಂತರವಾಗಿ ಉದ್ಯೋಗ ಮೇಳ ಆಯೋಜಿಸುತ್ತಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಲಶ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಉದ್ಯೋಗ ಮೇಳ ಜರುಗುವ ಕಲಬುರಗಿ ನಗರದ ಕೆ.ಸಿ.ಟಿ ಇಂಜಿನೀಯರಿಂಗ್ ಕಾಲೇಜಿಗೆ ರವಿವಾರ ಅಧಿಕಾರಿಗಳೊಂದಿಗೆ ಭೇಟಿ‌ ನೀಡಿ ಸ್ಥಳ ಪರಿಶೀಲನೆ ನಡೆಸಿದ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ದೊಡ್ಡದಾಗಿ ನಿರುದ್ಯೋಗ ಸಮಸ್ಯೆ ಕಂಡರು ಕೇಂದ್ರ ಸರ್ಕಾರ ಇತ್ತ ಗಮನ ಹರಿಸುತ್ತಿಲ್ಲ. ಅದರೇ ರಾಜ್ಯ ಸರ್ಕಾರ ಯುವಕರ ಕ್ಷೇಮಾಭಿವೃದ್ಧಿಗೆ ಬದ್ಧವಾಗಿದ್ದು, ಅವರ ಭವಿಷ್ಯ ಭದ್ರವಾಗಿಸುವ ನಿಟ್ಟಿನಲ್ಲಿ ಉದ್ಯೋಗ ನೀಡುವ ಕೆಲಸ ಮಾಡುತ್ತಿದೆ ಎಂದರು.

ಕಲಬುರಗಿಯಲ್ಲಿ ಕೆ.ಸಿ.ಟಿ. ಇಂಜಿನೀಯರಿಂಗ್ ಕಾಲೇಜಿನಲ್ಲಿ ಇದೇ ಎಪ್ರಿಲ್ 16 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಕಲಬುರಗಿ ವಿಭಾಗ ಮಟ್ಟದ ಉದ್ಯೋಗ ಮೇಳ ಆಯೋಜಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಇದಕ್ಕೆ ಚಾಲನೆ ನೀಡಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಕಳೆದ ಬಾರಿ ಬೆಂಗಳೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದಾಗ ಸುಮಾರು 45 ಸಾವಿರ ಜನ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ನಿರುದ್ಯೋಗ ಸಮಸ್ಯೆ ಚೆನ್ನಾಗಿ ಅರಿತಿರುವ ರಾಜ್ಯ ಸರ್ಕಾರ ವಿಭಾಗವಾರು ಉದ್ಯೋಗ ಮೇಳ ಆಯೋಜಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದು, ಇದೀಗ ಕಲಬುರಗಿಯಲ್ಲಿ ಮೇಳ ಆಯೋಜಿಸಿದೆ. ಇದಾದ ನಂತರ ಹುಬ್ಬಳ್ಳಿ ಅಥವಾ ಬೆಳಗಾವಿ ಮತ್ತು ಮೈಸೂರಿನಲ್ಲಿ ಇದೇ ರೀತಿಯ ಉದ್ಯೋಗ ಮೇಳ ಆಯೋಜಿಸಲು ನಿರ್ಧರಿಸಿದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾಹಿತಿ ನೀಡಿದರು.

ಕಲಬುರಗಿ ಉದ್ಯೋಗ ಮೇಳದಳ್ಳಿ ವಿವಿಧ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತೀರ್ಣರಾಗುವರಿಗೆ ಸ್ಥಳದಲ್ಲಿಯೇ ಆಫರ್ ಲೆಟರ್ ನೀಡಲಾಗುತ್ತದೆ. ಇನ್ನು ಆಯ್ಕೆಯಾಗದವರ ಅಭ್ಯರ್ಥಿಗಳ ಪಟ್ಟಿ ಮಾಡಿ ಅವರಿಗೆ ಅಗತ್ಯ ಕೌಶಲ್ಯ ನೀಡುವುದರ ಜೊತೆಗೆ ಮುಂದಿನ ದಿನದಲ್ಲಿ ಇವರನ್ನು ಪ್ಲೇಸ್ ಮೆಂಟ್ ಒದಗಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಕಂಪನಿಗಳೊಂದಿಗೆ ಕೌಶಲ್ಯಾಭಿವೃದ್ಧಿ ಇಲಾಖೆ ಸಮನ್ವಯ ಸಾಧಿಸಲಿದೆ ಎಂದರು.

ಬಸ್ ವ್ಯವಸ್ಥೆ, 40 ನೋಂದಣಿ ಕೌಂಟರ್:

ಕಲಬುರಗಿ ಉದ್ಯೋಗ ಮೇಳಕ್ಕೆ ವಿಭಾಗದ ವಿವಿಧ ಜಿಲ್ಲೆಗಳಿಂದ ಬರುವ ಅಭ್ಯರ್ಥಿಗಳಿಗೆ ಆಯಾ ಜಿಲ್ಲಾ, ತಾಲೂಕಾ ಕೇಂದ್ರಗಳಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಉದ್ಯೋಗ ಮೇಳ ಇಡೀ ದಿನ ನಡೆಯಲಿದ್ದು, ಸುಮಾರು 30-40 ಕೌಂಟರ್ ಸ್ಥಾಪಿಸಲಾಗುತ್ತಿದೆ. ಕಾಲೇಜಿನ ಆವರಣದಲ್ಲಿ ಕಂಪನಿಗಳು ಸಂದರ್ಶನ ನಡೆಸಲು ಅನುಕೂಲವಾಗುವಂತೆ 70 ಕೊಠಡಿಗಳನ್ನು ಕಂಪನಿಗಳಿಗೆ ನೀಡಲಾಗುತ್ತದೆ. ಇನ್ನು ಅಭ್ಯರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಸಹ ಮಾಡಲಾಗಿದೆ ಎಂದರು.

1 ಲಕ್ಷ ಹುದ್ದೆ ಬೇಡಿಕೆಯೊಂದಿಗೆ ಕಂಪನಿಗಳು ಭಾಗಿ:

ಬೆಂಗಳೂರಿನ 180 ಸೇರಿದಂತೆ ಹೈದರಾಬಾದ್, ಮುಂಬೈ ಹಾಗೂ ಸ್ಥಳೀಯರು ಸೇರಿ ಇದುವರೆಗೆ ಒಟ್ಟಾರೆ ವಿವಿಧ 30 ವಲಯದ 275 ಕಂಪನಿಗಳು 1 ಲಕ್ಷಕ್ಕೂ ಹೆಚ್ಚಿನ ಹುದ್ದೆ ಬೇಡಿಕೆಯೊಂದಿಗೆ ಮೇಳದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿವೆ. ಇದುವರೆಗೆ ಸುಮಾರು 17 ಸಾವಿರ ಅಭ್ಯರ್ಥಿಗಳು ಸಹ ನೋಂದಣಿ ಮಾಡಿದ್ದು, 25 ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದರು.

ಯುವ‌ ನಿಧಿ ಯೋಜನೆಯಡಿ ರಾಜ್ಯದಾದ್ಯಂತ 2.50 ಲಕ್ಷ ನಿರುದ್ಯೋಗಿ ಯುವ ಸಮೂಹ ನೊಂದಣಿ ಮಾಡಿಕೊಂಡಿದ್ದು, ಇದರಲ್ಲಿ ಅರ್ಹ 1.75 ಲಕ್ಷ ಪದವಿ ಮತ್ತು ಡಿಪ್ಲೋಮಾ ಪದವೀಧರರಿಗೆ 1,500 ಮತ್ತು 3,000 ರೂ. ನಿರುದ್ಯೋಗ ಭತ್ಯೆ‌ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಯುವ ನಿಧಿ ಯೋಜನೆಯಡಿ ನೊಂದಾಯಿತ 75 ಸಾವಿರ ಜನರಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಮಾಹಿತಿ ನೀಡಲಾಗಿದೆ. ನೋಂದಣಿ ಪ್ರಕ್ರಿಯೆ ನಿರಂತರವಾಗಿ ನಡೆಯಲಿದ್ದು, ಆನ್ ಲೈನ್ ಮೂಲಕ https://skillconnect.kaushalkar.com ನೊಂದಾಯಿಸಿಕೊಂಡು ಮೇಳದಲ್ಲಿ ಭಾಗವಹಿಸಬಹುದಾಗಿದೆ. ಇನ್ನು ನೇರವಾಗಿ ಅಗಮಿಸುವ ಅಭ್ಯರ್ಥಿಗಳಿಗೆ ಸ್ಪಾಟ್ ರಿಜಿಸ್ಟ್ರೇಷನ್ ವ್ಯವಸ್ಥೆ ಸಹ ಮಾಡಲಾಗಿದೆ ಎಂದ ಸಚಿವರು, ಕಲ್ಯಾಣ ಕರ್ನಾಟಕದ ನಿರುದ್ಯೋಗ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಲಾಭ ಪಡೆಯುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

ಉದ್ಯೋಗ ಮೇಳದಲ್ಲಿ ಯಾವೆಲ್ಲ ಕಂಪನಿಗಳು ಭಾಗಿ?

ಕಲಬುರಗಿ ಉದ್ಯೋಗ ಮೇಳಕ್ಕೆ ಐ.ಟಿ. ಕಂಪನಿಗಳಾದ ಎಚ್.ಸಿ.ಎಲ್ ಟೆಕ್ ಬೀ, ಜಿ-ಟೆಕ್, ಎಕ್ಸೆಲ್ ಕಾರ್ಪ್ ಯು.ಎಸ್.ಎ., ಲೈನಸ್ ಕಾರ್ಟ್ ಐ.ಟಿ.ಸಲೂಷನ್ಸ್ ಪ್ರೈ.ಲಿ., ಮ್ಯಾಡಲ್ಯಾಬ್ಸ್ ಇನ್ಫೋಟೆಕ್ ಪ್ರೈ.ಲಿ., ಸಿಸ್ಪೈಡರ್ ಟೆಕ್ನೋಲಾಜಿಸ್, ಟೆಕ್ ಹಬೀಬ್ ಕಮ್ಯೂನಿಕೇಷನ್ ಪ್ರೈ.ಲಿ., ಎಂಕೋ ಜಿ.ಸಿ.ಸಿ., ಅಲ್ಲರ್ ಟೆಕ್ನೋಲಾಜೀಸ್ ಪ್ರೈ.ಲಿ., ವರ್ಕ್ ಕ್ಯೂಬಿಕ್ ಪ್ರೈ.ಲಿ., ಡಿಜಿಸ್ನೇರ್ ಟೆಕ್ನಾಲೋಜಿಸ್ ಪ್ರೈ.ಲಿ., ಟೆಕ್ ಬಡ್ಡಿಸ್, ಐಸನ್ ಎಕ್ಸಪೀರೆಯನ್ಸೆಸ್, ಹೈ ಐಡಿಯಲ್ಸ್ ಟೆಕ್ನೋಲಾಜಿಸ್ ಪ್ರೈ.ಲಿ., ರಿಲಾಯನ್ಸ್ ಫೌಂಡೇಷನ್, ಇನ್ಫೋಜಿಕ್ ಸಲೂಷನ್ಸ್ ಇಂಡಿಯಾ ಪ್ರೈ.ಲಿ., ಪ್ಯಾರಾಡಿಗ್ ಐ.ಟಿ. ಟೆಕ್ನೋಲಾಜಿಸ್ ಪ್ರೈ.ಲಿ., ಮಧುಪುಶ್ಪಾ ಟೆಕ್ನೋಲಾಜಿಸ್ ಪ್ರೈ.ಲಿ., ಗ್ರೇಟ್ ಇಂಡಿಯನ್ ಕ್ಯಾರಿಯರ್ ಅಕಾಡೆಮಿ ಭಾಗವಹಿಸಲಿವೆ.

ಇದಲ್ಲದೆ ಜೆ.ಎಸ್.ಡಬ್ಲ್ಯೂ ಸ್ಟೀಲ್ ಲಿ., ಎಲ್ & ಟಿ ಲಿ., ಅಲ್ಟ್ರಾಟೆಕ್‌ ಸಿಮೆಂಟ್ ಲಿ.,ಚೆಟ್ಟಿನಾಡ್ ಸಿಮೆಂಟ್ ಕಾರ್ಪೋರೇಷನ್ ಪ್ರೈ.ಲಿ., ಓರಿಯಂಟ್ ಸಿಮೆಂಟ್, ದೊಡ್ಲಾ ಡೈರಿ ಲಿ., ಕಲಬುರಗಿ ಸಿಮೆಂಟ್ ಪ್ರೈ.ಲಿ., ಏಜಿಲ್ ಏರ್ಪೋರ್ಟ್ ಸರ್ವಿಸ್ ಪ್ರೈ.ಲಿ., ಟಾಟಾ ಎಲೆಕ್ಟ್ರಾನಿನ್ಸ್ ಸಿಸ್ಟಮ್ಸ್ ಸಲೂಷನ್ಸ್, ಎಂ.ಆರ್.ಎಫ್ ಲಿ., ಮೆಡ್ ಪ್ಲಸ್, ಅರವಿಂದ ಲಿ., ಹಿಂದುಜಾ ಗ್ಲೋಬಲ್‌ ಸಲೂಷನ್ಸ್, ಶಾಹಿ ಎಕ್ಸ್ ಪೋರ್ಟ್ ಪ್ರೈ.ಲಿ., ಜೆಪ್ಟೋ, ಜೊಯಾಲುಕ್ಕಾಸ್ ಇಂಡಿಯಾ ಪ್ರೈ.ಲಿ., ಸೆಲಿಬಿ ಏರ್ಪೋರ್ಟ್ ಸರ್ವಿಸ್ ಇಂಡಿಯಾ ಪ್ರೈ.ಲಿ., ಅಡೆಕ್ಕೋ ಇಂಡಿಯಾ, ಅಪೊಲೋ ಮೆಡ್ ಸ್ಕಿಲ್ಸ್ ಲಿ., ಹೆಚ್.ಡಿ.ಎಫ್.ಸಿ ಬ್ಯಾಂಕ್, ಡಾ.ರೆಡ್ಡಿ ಫೌಂಡೇಷನ್, ಬಯೋಕಾನ್ ಬಯೋಲಾಜಿಸ್ ಲಿ., ಡೆಲಿವರಿ ಲಿ., ಅರೆನಾ‌ ಏನಿಮೇಷನ್, ಸನ್ಸೇರಾ ಇಂಜಿನೀಯರಿಂಗ್ ಲಿ.‌ ಸೇರಿದಂತೆ‌ ಅನೇಕ ಕಂಪನಿಗಳು ಭಾಗವಹಿಸಲಿವೆ‌ ಎಂದು ಸಚಿವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕೆ.ಸಿ.ಟಿ. ಕಾಲೇಜು ಆಡಳಿತ ಮಂಡಳಿಯ ಜಂಟಿ ಕಾರ್ಯದರ್ಶಿ ಮುಬಶೀರ್ ಮನಿಯಾರ್ ಇದ್ದರು.










share
ವಾರ್ತಾಭಾರತಿ
ವಾರ್ತಾಭಾರತಿ
Next Story
X