ಪ್ರವಾದಿ ಪೈಗಂಬರ್ ಕುರಿತು ದ್ವೇಷ ಭಾಷಣ | ಯತಿ ನರಸಿಂಹಾನಂದ ವಿರುದ್ಧ ಕಲಬುರಗಿಯ ಮೂರು ಕಡೆ ಪ್ರಕರಣ ದಾಖಲು
ಕಲಬುರಗಿ : ಪ್ರವಾದಿ ಪೈಗಂಬರ್ ಅವರ ಕುರಿತು ಪ್ರಚೋದನಾತ್ಮಕ ಹೇಳಿಕೆ ಮತ್ತು ಇಸ್ಲಾಂ ಧರ್ಮದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಅವಹೇಳನ ಮಾಡಿರುವ ಯತಿ ನರಸಿಂಹಾನಂದ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದಂತೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಂಬಂಧ ಕಲಬುರಗಿಯಲ್ಲಿ ಯತಿ ನರಸಿಂಹಾನಂದ ವಿರುದ್ಧ ಮೂರು ಕಡೆ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.
ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾಂತರ ಅಧ್ಯಕ್ಷ ನಯೀಮ್ ಖಾನ್ ಮತ್ತು ಪಾಲಿಕೆ ಸದಸ್ಯ ಅಜ್ಮಲ್ ಗೋಲಾ ದೂರು ದಾಖಲಿಸಿದ್ದಾರೆ. ಹಾಗೆಯೇ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಖಿದ್ಮತ್ ಇ ಮಿಲ್ಲತ್ ಸದಸ್ಯ ಮುಹಮ್ಮದ್ ಅಬ್ಬಾಸ್, ಇಮ್ರಾನ್ ರಜ್ವಿ ಹಾಗೂ ಸಬ್‌ಅರ್ಬನ್ ಪೊಲೀಸ್ ಠಾಣೆಯಲ್ಲಿ ಹಾಜಿ ಬಾಬಾ ಮುಹಮ್ಮದ್ ಹುಸೇನ್ ಅವರು ದೂರು ದಾಖಲಿಸಿದ್ದಾರೆ.
ಸಬ್‌ಅರ್ಬನ್ ಠಾಣೆಯಲ್ಲಿ ಕಲಂ 196, 197, 299, 302 ಅಡಿ ಹಾಗೂ ಆರ್‌ಜಿ ನಗರ, ರೋಜಾ ಪೊಲೀಸ್ ಠಾಣೆಗಳಲ್ಲಿ ಬಿಎನ್ಎಸ್ 196, 297, 302 353(2) ಯಡಿ ಪ್ರಕರಣ ದಾಖಲಾಗಿದೆ.