ಮಹಿಳೆಯರ ಶಿಕ್ಷಣಕ್ಕಾಗಿ ಅವಿರತ ಶ್ರಮಿಸಿದವರು ಜ್ಯೋತಿಬಾ ಫುಲೆ : ಶ್ರೀಶೈಲ್ ನಾಯ್ಕೋಡಿ ದೇವಂತಗಿ
ಕಲಬುರಗಿ : ಮಹಾತ್ಮ ಜ್ಯೋತಿಬಾ ಫುಲೆ ಅವರು ಮಹಿಳೆಯರ ಶಿಕ್ಷಣಕ್ಕಾಗಿ ಅವಿರತ ಶ್ರಮಿಸಿದ್ದಾರೆ ಎಂದು ಶ್ರೀಶೈಲ್ ನಾಯ್ಕೋಡಿ ಹೇಳಿದ್ಧಾರೆ.
ಆಳಂದ ಪಟ್ಟಣದ ತ್ರಿಮೂರ್ತಿ ವಾಟರ್ ಫಿಲ್ಟರ್ ಕಚೇರಿಯಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜ್ಯೋತಿಬಾ ಫುಲೆ ಅವರು ಶಿಕ್ಷಣ ಕ್ರಾಂತಿಯ ಜೊತೆಗೆ ಸಾಮಾಜಿಕ ಕ್ರಾಂತಿ ಮಾಡಿದ್ದಾರೆ, ಅವರು ವಿಶೇಷವಾಗಿ ಮಹಿಳೆಯರ ಶಿಕ್ಷಣಕ್ಕಾಗಿ ಮತ್ತು ಅವರ ಸ್ವತಂತ್ರಕ್ಕಾಗಿ ಹೋರಾಟ ಮಾಡಿದ್ದಾರೆ ಎಂದರು.
ಶಿವಕುಮಾರ್ ಚಿಂಚೋಳಿ ಮಾತನಾಡಿ, ಜ್ಯೋತಿಬಾ ಫುಲೆ ಅವರನ್ನು ಡಾ.ಬಾಬಾ.ಸಾಹೇಬ್ ಅಂಬೇಡ್ಕರ್ ಅವರು ಗುರು ಎಂದು ಒಪ್ಕೊಂಡಿದ್ದರು. ಜ್ಯೋತಿಬಾ ಫುಲೆ ಅವರು ಜಾತಿ, ಮತ, ಪಂಥ, ಭೇದ ನೋಡದೆ ಎಲ್ಲರಿಗೂ ಶಿಕ್ಷಣ ನೀಡಬೇಕೆಂಬ ಮಹಾದಾಸೆಯಿಂದ ಶಿಕ್ಷಣ ರಂಗದಲ್ಲಿ ಅತಿ ದೊಡ್ಡ ಹೋರಾಟ ನಡೆಸಿ, ಸರ್ವರಿಗೂ ಶಿಕ್ಷಣ ನೀಡಿದಂತ ಧೀಮಂತ ನಾಯಕ ಅವರಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಶಿಕಾಂತ ಬೆಡಜೂರ, ಶಾಂತಪ್ಪ ಕಡಗಂಚಿ, ಶ್ರೀಮಂತ ಮೇಲಕೇರಿ, ಚಂದ್ರಮಪ್ಪ ಕಾಳೆ ಇತರರು ಇದ್ದರು.