ಕಲಬುರಗಿ | ದಲಿತ ಸಂಘರ್ಷ ಸಮಿತಿಯಿಂದ ಮನಸ್ಮೃತಿ, ಅಮಿತ್ ಶಾ ಪ್ರತಿಕ್ರಿತಿ ದಹನ
ಕಲಬುರಗಿ : ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಅಪಮಾನಿಸಿದ ಕೇಂದ್ರ ಸಚಿವ ಅಮಿತ್ ಶಾ ಮತ್ತು ಮನುಸ್ಮೃತಿಯ ಗ್ರಂಥದ ಪ್ರತಿಗಳನ್ನು ದಹನ ಮಾಡುವ ಮೂಲಕ ದಲಿತ ಸಂಘರ್ಷ ಸಮಿತಿಯ ಮುಖಂಡರು ನಗರದ ಜಗತ್ ವೃತ್ತದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅವರ ಕುರಿತಾಗಿ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು. ಅಲ್ಲದೆ ಜಾತಿಯತೆ ಲಿಂಗ ಅಸಮಾನತೆ ಯನ್ನು ತೋರಿಸಿಕೊಡುವ ಮನಸ್ಮೃತಿಯು ಮಾನವನ ವಿರೋಧ ಗ್ರಂಥವಾಗಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ, 1927ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರಗತಿಪರ ಚಿಂತಕರ ಜೊತೆಗೂಡಿ ಮನುಸ್ಮೃತಿಯನ್ನು ಸುಟ್ಟು ಹಾಕಿದರು. ಬಳಿಕ ಅವರು ಸಮಾಜದಲ್ಲಿ ಅಸಮಾನತೆಯನ್ನು ತೊಡೆದು ಹಾಕಲು 1950ರಲ್ಲಿ ದೇಶಕ್ಕೆ ಸಂವಿಧಾನವನ್ನು ಸಮರ್ಪಣೆ ಮಾಡಿದರು. ಆದರೂ ಇಂದಿನ ದಿನಗಳಲ್ಲಿ ಮನುಸ್ಮೃತಿ ಜಾರಿಗೆ ತರಲು ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ್ ಖನ್ನ, ಎಸ್.ಆರ್.ಕೊಲ್ಲೂರು, ಮಲ್ಲಿಕಾರ್ಜುನ ಕ್ರಾಂತಿ, ಸೂರ್ಯಕಾಂತ್ ಅಜಾದ್ಪುರ್, ಮಹೇಶ್ ಕೋಕಿಲೆ, ಅಜೀಜ್ ಐಕೂರ್, ಸೈಬಣ್ಣ ನಾಗಲೇಗಾವ್, ಪರಶುರಾಮ ರಾಜಾಪುರ್, ಮಹಾಂತೇಶ್ ಬಡದಾಳ, ಮಹೇಶ್ ಸುಲೇಕರ್, ಸುಭಾಷ್ ಕಲ್ಮೊರೆ ಸೇರಿದಂತೆ ಹಲವು ದಲಿತ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.