ಕಲಬುರಗಿ | ಆಳಂದದಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ
ಕಲಬುರಗಿ : ಯೇಸು ಕ್ರಿಸ್ತನ ಜನ್ಮ ಮಾನವತೆಗೆ ದೇವರ ಆಶೀರ್ವಾದ ಮತ್ತು ದೈವಿಕ ಅನುಗ್ರಹದ ಪ್ರತೀಕವಾಗಿದೆ ಎಂದು ಸ್ಥಳೀಯ ಶಾಂತಿವನ ಚರ್ಚ್ ಫಾದರ್ ಬಾಪು ಅವರು ಹೇಳಿದರು.
ಆಳಂದ ಪಟ್ಟಣದ ಬಸ್ ನಿಲ್ದಾಣ ಮುಂದೆ ಬುಧವಾರ ಶಾಂತಿವನ ಚರ್ಚ್ ಆಶ್ರಯದಲ್ಲಿ ಹಮ್ಮಿಕೊಂಡ ಕ್ರಿಸ್ಮಸ್ ಹಬ್ಬದ ಆಚರಣೆ ನಿಮಿತ್ತ ಕೈಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೇಸುಕ್ರಿಸ್ತರು ಇಡೀ ಲೋಕದ ರಕ್ಷಣೆಗಾಗಿ ಈ ಭೂಮಿಯಲ್ಲಿ ದೀನರಾಗಿ ಜನಿಸಿದರು. ಇಡೀ ಜಗತ್ತಿಗೆ ಶಾಂತಿಯನ್ನು ಸಾರಿದರೂ, ಅದೇ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು ಹೇಳಿದರು.
ಉಸ್ತುರಿ ಧುತ್ತರಗಾಂವ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ನಾವೆಲ್ಲರೂ ಐಕ್ಯತೆಯಲ್ಲಿ ಜೀವಿಸಿ ಆ ಯೇಸು ಕ್ರಿಸ್ತನ ಸಂದೇಶವನ್ನು ಸಾರಬೇಕು ಎಂದು ನುಡಿದರು.
ಜಿಪಂ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ್, ಸಿಸ್ಟರ್, ಸೆಂಟ್ಮೇರಿ ಶಾಲೆಯ ಪ್ರಾಂಶುಪಾಲರು ಜೂಲಿಯಾನ, ಸಿಸ್ಟರ್ ತೆರೇಸಾ, ಸಿಸ್ಟರ್ ರೋಸ್ಲಿನ್, ಸ್ಟೀವನ್, ಸುಧಾ, ಆಶಾ, ಅಖಿಲ, ಅಂಬಿಕ, ಕೈಲಾಶ್ ಮತ್ತು ಅನೇಕ ಗಣ್ಯರು ಭಾಗವಹಿಸಿ ಯೇಸುಕ್ರಿಸ್ತರ ದರ್ಶನವನ್ನು ಪಡೆದರು.
ಸ್ಥಳೀಯ ಸಾರ್ವಜನಿಕರು, ಪ್ರಯಾಣಿಕರು, ಮತ್ತು ಚರ್ಚ್ ಅಭಿಮಾನಿಗಳು ಈ ಆಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿದ್ದು, ಎಲ್ಲರಿಗೂ ಕೇಕ್ ವಿತರಣೆ ಮಾಡಲಾಯಿತು.