ಕಲಬುರಗಿ | ಎರಡು ಲಾರಿಗಳ ನಡುವೆ ಅಪಘಾತ : ಚಾಲಕ ಆಸ್ಪತ್ರೆಗೆ ದಾಖಲು

ಕಲಬುರಗಿ : ಎರಡು ಲಾರಿಗಳ ನಡುವೆ ಭೀಕರ ಅಪಘಾತ ಸಂಭವಿಸಿ ಲಾರಿ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಘಟನೆ ನಗರ ಸಂಚಾರಿ ಪೊಲೀಸ್ ಠಾಣೆ-2 ವ್ಯಾಪ್ತಿಯ ಇಂಡಸ್ಟ್ರಿಯಲ್ ರಿಂಗ್ ಹತ್ತಿರ ಶನಿವಾರ ರಾತ್ರಿ ನಡೆದಿದೆ.
ರಿಂಗ್ ರೋಡ್ ಪ್ರದೇಶದ ಹಾಗರಗಾ ಕ್ರಾಸ್ ಹತ್ತಿರ ಬೈಕ್ ಮತ್ತು ಲಾರಿ ಢಿಕ್ಕಿ ಸಂಭವಿಸಿ ವ್ಯಕ್ತಿ ಮೃತಪಟ್ಟ ಕೆಲವೇ ನಿಮಿಷಗಳಲ್ಲಿ ಸ್ವಲ್ಪ ದೂರದಲ್ಲೇ ಎರಡು ಲಾರಿಗಳು ಓವರ್ ಟೆಕ್ ಮಾಡುವಾಗ ಅಪಘಾತ ಸಂಭವಿಸಿದೆ.
ಲಾರಿ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಬಾರೇ ಹಿಲ್ಸ್ ಪ್ರದೇಶದಿಂದ ಹುಮನಾಬಾದ್ ರಿಂಗ್ ವರೆಗೆ ಫೊರ್ ಲೈನ್ ರಸ್ತೆಯ ಕಾಮಗಾರಿ ವಿಳಂಬ ಮಾಡುತ್ತಿರುವುದರಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ಜಿಲ್ಲಾಡಳಿತ, ಶಾಸಕರು ಮತ್ತು ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
Next Story