ಕಲಬುರಗಿ | ರೈತರ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ, ಮಾರುಕಟ್ಟೆ ಒದಗಿಸಬೇಕು : ಪಚ್ಚೆ ನಂಜುಂಡಸ್ವಾಮಿ
ಕಲಬುರಗಿ : ಪ್ರಸ್ತುತ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಒಗ್ಗಟ್ಟಿನ ಹೋರಾಟ ನಡೆಸಬೇಕು. ಸರ್ಕಾರವು ಉಚಿತ ಬದಲು ರೈತರ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ಹಾಗೂ ಮಾರುಕಟ್ಟೆ ಒದಗಿಸಬೇಕು ಎಂದು ರಾಜ್ಯ ರೈತ ಒಕ್ಕೂಟದ ಅಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ ಅವರು ಹೇಳಿದರು.
ನಗರದ ಶ್ರೀ ಶರಣಬಸವೇಶ್ವರ್ ದೇವಸ್ಥಾನದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ಸೋಮವಾರ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ ರೈತ ಉತ್ಸವ ಸುಗ್ಗಿ ಹಬ್ಬ ಹಾಗೂ ಜಿಲ್ಲಾ ಮಟ್ಟದ ರೈತರ ಸಮಾವೇಶ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತ ಚಳುವಳಿ ದೊಡ್ಡದು. ಈಗಾಗಲೇ ರೈತ ಚಳುವಳಿಯ ಮೂಲಕ ಹಲವಾರು ಸಮಸ್ಯೆಗಳನ್ನು ಯಶಸ್ವಿಯಾಗಿ ಈಡೇರಿಸಿಕೊಳ್ಳಲಾಗಿದೆ ಎಂದರು.
ಕಬ್ಬಿಗೆ ರಾಜ್ಯ ಸರ್ಕಾರವು 5,000 ರೂ.ಗಳ ಬೆಂಬಲ ಬೆಲೆ ನೀಡಬೇಕು. ಈಗಾಗಲೇ ಗುಜರಾತ್ನಲ್ಲಿ 6,000 ರೂ.ಗಳು, ಮಹಾರಾಷ್ಟ್ರದಲ್ಲಿ 5,000 ರೂ.ಗಳ ಬೆಂಬಲ ಬೆಲೆಯನ್ನು ಕಬ್ಬಿಗೆ ಘೋಷಿಸಲಾಗಿದೆ ಎಂದು ಹೇಳಿದ ಅವರು, ಕಳೆದ ಹತ್ತು ವರ್ಷಗಳಿಂದಲೂ ಭತ್ತಕ್ಕೆ ದರ ಹೆಚ್ಚಳವಾಗಿಲ್ಲ. ಈಗಂತೂ ಒಂದು ಸಾವಿರ ರೂ.ಗಳ ಬೆಲೆ ಕಡಿಮೆಯಾಗಿದೆ. ಹೀಗಾಗಿ ಸೂಕ್ತ ಬೆಲೆ ಸಿಗಲು ರಾಜ್ಯ ಸರ್ಕಾರವು ತಾಲ್ಲೂಕಿನಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಕೇಂದ್ರಗಳು ದಿನದ 24 ಗಂಟೆಗಳವರೆಗೆ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ಪ್ರಗತಿಪರ ಚಿಂತಕ ಭಗವಂತರಾಯ್ ಬೆಣ್ಣೂರ್ ಅವರು ವಿಶೇಷ ಉಪನ್ಯಾಸ ನೀಡಿ, ಜಿಲ್ಲೆಯಲ್ಲಿ ಭೀಮಾ, ಅಮರ್ಜಾ, ಕಾಗಿಣಾ, ಮುಲ್ಲಾಮಾರಿ, ಗಂಡೋರಿ ಸೇರಿದಂತೆ ಅನೇಕ ನದಿಗಳು ಇವೆ. ಆದಾಗ್ಯೂ, ನೀರನ್ನು ನಾವು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಭೀಮಾ ನದಿಯಲ್ಲಿನ ಕರ್ನಾಟಕದ ಹಕ್ಕನ್ನೂ ಸಹ ಪಡೆಯುವಲ್ಲಿ ನಾವು ವಿಫಲವಾಗಿದ್ದೇವೆ. ಅದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜ ಸೇವಕಿ ದಿವ್ಯಾ ಹಾಗರಗಿ, ಬಸವರಾಜ್ ದೇಶಮುಖ್ ಅವರು ಮಾತನಾಡಿ, ರೈತರು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದರು.
ದಿವ್ಯ ಸಾನಿಧ್ಯವನ್ನು ತೊನಸನಹಳ್ಳಿ ಅಲ್ಲಮಪ್ರಭು ಸಂಸ್ಥಾನ ಮಠದ ಡಾ.ಮಲ್ಲಣ್ಣಪ್ಪ ಮುತ್ಯಾ ಅವರು ವಹಿಸಿದ್ದರು. ಚಿ.ದೊಡ್ಡಪ್ಪ ಅಪ್ಪಾ ದಿವ್ಯ ಸಾನಿಧ್ಯ ವಹಿಸಿದ್ದರು. ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ, ಸೋಪಿಸಾಬ್ ಗಂವ್ಹಾರ್, ಎಂ.ಎಸ್. ಪಾಟೀಲ್ ನರಿಬೋಳ್, ಮಲ್ಲಿಕಾರ್ಜುನ್ ಸಾರವಾಡ್, ಡಾ.ಮಲ್ಲಿಕಾರ್ಜುನ್ ಎಸ್.ಗಂವ್ಹಾರ್, ಸಾಯಬಣ್ಣ ಪೂಜಾರಿ ಕುಮ್ಮನಸಿರಸಗಿ, ಅನಿತಾ ಎಚ್.ಪಾಟೀಲ್, ಶ್ರೀಮತಿ ಶರಣಮ್ಮ ಹಿರೇಮಠ್, ಸುಮಿತ್ರಾ ಪಾಟೀಲ್, ಪರಮೇಶ್ವರ್ ಬಿರಾಳ್, ಸಿದ್ದನಗೌಡ ಬಿರಾದಾರ್ ಮಾವನೂರ್, ರವಿಕುಮಾರ್ ಮಾರಡಗಿ, ಡಾ. ಅಲ್ಲಮಪ್ರಭು ದೇಶಮುಖ್, ಶ್ರವಣಕುಮಾರ್ ಡಿ.ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಾಪುಗೌಡ ಪಾಟೀಲ್ ಬಿರಾಳ್(ಬಿ), ರವಿ ಬಿರಾದಾರ್, ದೇವೆಂದ್ರ ಈ. ತಳವಾರ್, ದ್ರಾಕ್ಷಾಯಣಿ ರಾವುತ್, ವಿಶ್ವರಾಧ್ಯ ಬಡಿಗೇರ್, ಮಹೇಶ್ ಎಸ್.ಗೊಬ್ಬೂರ್, ಸುಭಾಷ್ ಹೊಸಮನಿ ಅವರಿಗೆ ಸಾಮಾಜಿಕ ಸೇವಾ ರತ್ನ ಪ್ರಶಸ್ತಿ, ಬಸವರಾಜ್ ಅ.ಚಿನಿವಾರ್, ಮಂಜುನಾಥ್ ಜಮಾದಾರ್, ಡಾ.ಸಂತೋಷ್ ನವಲಗುಂದ್, ಮರೆಪ್ಪ ಬೇಗಾರ್, ಸಂತೋಷ್ ಪಾಟೀಲ್, ರೇವಣಸಿದ್ದ ಹೆಗಡೆ ಸೊನ್ನ, ಸಿದ್ದನಗೌಡ ಬಿರಾದಾರ್ ಮಾವನೂರ್, ವಿಜಯಕುಮಾರ್ ಮಲ್ಲೇದ್, ಜಟ್ಟೆಪ್ಪ ಪೂಜಾರಿ ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಲ್ಯಾಣಕುಮಾರ್ ಸಂಗಾವಿ, ಯಶವಂತರಾಯ್ ಹೋತಿನಮಡು, ಬಸನಗೌಡ ಎಂ. ಸಾಹು ಅರಕೇರಿ, ಸಿದ್ದಪ್ಪ ಎಸ್. ನಾಯ್ಕೋಡಿ, ಸುನೀಲಕುಮಾರ್ ಕಡಕೋಳ್, ಚಂದ್ರಶೇಖರ್ ಎಸ್. ರೋಗಿ ಅವರಿಗೆ ರೈತ ರತ್ನ ಪ್ರಶಸ್ತಿ ಹಾಗೂ ಅಮೃತ್ ಪಾಟೀಲ್ ಸಿರನೂರ್, ಈರಣ್ಣಗೌಡ ಪಾಟೀಲ್ ಗುಳ್ಯಾಳ್, ಪರಮೇಶ್ವರ್ ನಾಯಕ್ ಬಿರಾಳ್, ಪರಮಾನಂದ್ ಯಲಗೋಡ್, ಸುಭಾಷ್ ಪೂಜಾರಿ ಹೋತಪೇಟ್, ಶ್ರವಣಕುಮಾರ್ ಡಿ. ನಾಯಕ್, ಅಲ್ಲಾ ಪಟೇಲ್ ಮಾಲಿ ಬಿರಾದಾರ್ ಅವರಿಗೆ ಹೋರಾಟ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಾಂತರಾಜ್ ಎ. ಪಾಟೀಲ್ ನರಿಬೋಳ್, ಭೀಮಾಶಂಕರ್ ಬಿ. ಬಸವಪಟ್ಟಣ್, ರವಿಚಂದ್ರ ಗುತ್ತೇದಾರ್, ರಾಜಶೇಖರ್ ಶಿಲ್ಪಿ, ಶ್ರೀಮತಿ ಸತ್ಯಮ್ಮಾ ಹೊಸಮನಿ ಅವರಿಗೆ ಕಾನೂನು ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲೆ ಹಾಗೂ ತಾಲ್ಲೂಕು ಪದಾಧಿಕಾರಿಗಳೂ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.