ಕಲಬುರಗಿ: ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕಲಬುರಗಿ: ರಾಜ್ಯ ಸರಕಾರಿ ನೌಕರರ ಜಿಲ್ಲಾ ಸಂಘ, ಜಿಲ್ಲಾಡಳಿತದಿಂದ 2024 ಮತ್ತು 2025ನೇ ಸಾಲಿನ ಜಿಲ್ಲಾ ಮತ್ತು ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ರಾಜ್ಯ ಸರಕಾರಿ ಅಧಿಕಾರಿಗಳು, ನೌಕರರು ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆನ್ ಲೈನ್ ಮೂಲಕ ನಾಮನಿರ್ದೇಶನ ಸಲ್ಲಿಸಲು ಏ.14 ಅಂತಿಮ ದಿನಾಂಕವಾಗಿದೆ. ಜಿಲ್ಲಾ ಹಂತದಲ್ಲಿ 2024ನೇ ಸಾಲಿಗೆ 10 ಪ್ರಶಸ್ತಿ, 2025ನೇ ಸಾಲಿಗೆ 10 ಪ್ರಶಸ್ತಿ ಒಟ್ಟು 20 ಪ್ರಶಸ್ತಿಗಳನ್ನು ಪ್ರತ್ಯೇಕವಾಗಿ ಪ್ರಶಸ್ತಿ ಆಯ್ಕೆಗೊಳಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ವರ್ಷಕ್ಕೆ ಇಬ್ಬರಂತೆ ಒಟ್ಟು 4 ಹೆಸರುಗಳನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸರಕಾರಿ ನೌಕರರ ಸಂಘದ ಆಶ್ರಯದೊಂದಿಗೆ ಆಯ್ಕೆಗೊಳಿಸಿ ಏ.16ಕ್ಕೆ ಸರಕಾರಕ್ಕೆ ಶಿಪಾರಸು ಮಾಡಲಾಗುವುದು. ಹೀಗಾಗಿ ಸರಕಾರಿ ಅಧಿಕಾರಿಗಳು, ನೌಕರರು ಸರ್ವೋತ್ತಮ ಸೇವಾ ಪ್ರಶಸ್ತಿ ಗೆ ಅನ್ ಲೈನ್ ಲಿಂಕ್ http://sarvothamaawards. karanataka.gov.in ಗೆ ಏ.14ರೊಳಗಾಗಿ ನಾಮನಿರ್ದೇಶನ ಸಲ್ಲಿಸಬೇಕು ಎಂದು ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.