ಕಲಬುರಗಿ | ಡೀಸೆಲ್ ದರ ಏರಿಕೆಗೆ ಬಾಲರಾಜ್ ಗುತ್ತೇದಾರ ಖಂಡನೆ

ಕಲಬುರಗಿ : ಡೀಸೆಲ್ ದರ ಲೀಟರಿಗೆ 2 ರೂ. ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರಕಾರದ ನಿರ್ಧಾರವನ್ನು ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಅವರು ಕಟುವಾಗಿ ಟೀಕಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದ ಜನತೆಗೆ ಕಾಂಗ್ರೆಸ್ ಸರಕಾರ ಇನ್ನೊಂದು ಶಾಕ್ ನೀಡಿದೆ ಎಂದಿದ್ದಾರೆ.
ಕಳೆದ ಹತ್ತು ತಿಂಗಳಲ್ಲಿ ಡಿಸೇಲ್ ಪ್ರತಿ ಲೀಟರಿಗೆ 5 ರೂ. ಏರಿಕೆ ಭಾಗ್ಯ ಕೊಟ್ಟಿರುವ ರಾಜ್ಯ ಕಾಂಗ್ರೆಸ್ ಸರಕಾರ, ಯುಗಾದಿ ಹೊಸ ದಿನವೇ ಹೊಸ ಹೊಸ ದರ ವಿಧಿಸಿ, ಸಾಮಾನ್ಯ ಜನರ ಜೀವ ಹಿಂಡಿ ವಿಜೃಂಭಿಸುತ್ತಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಬೆಳಗ್ಗೆ ನಿದ್ರೆಯಿಂದ ಜನರೆದ್ದರೆ ಸುಲಿಗೆ ಬರೆ ಹಾಕುತ್ತಿದೆ. ಕೂಡಲೇ ಹಾಲಿನ ಹಾಗೂ ಡಿಸೆಲ್ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
Next Story