ಕಲಬುರಗಿ ಬಂದ್: ಬೆಳ್ಳಂ ಬೆಳಿಗ್ಗೆಯೇ ಪ್ರಾರಂಭವಾದ ಪ್ರತಿಭಟನೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕೃತಿ ದಹನ
ಅಮಿತ್ ಶಾ ಪ್ರತಿಕೃತಿ ದಹಿಸುತ್ತಿರುವ ಪ್ರತಿಭಟನಾಕಾರರು
ಕಲಬುರಗಿ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಸಂವಿಧಾನ ರಕ್ಷಣಾ ಸಮಿತಿ, ದಲಿತಪರ ಹಾಗೂ ವಿವಿಧ ಸಂಘಟನೆಗಳು ಮಂಗಳವಾರ ಕಲಬುರಗಿ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಗ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಕಲಬುರಗಿ ಬಂದ್ ಹಿನ್ನೆಲೆ ನಗರದ ಹಲವೆಡೆ ಬೆಳಗ್ಗೆಯೇ ಪ್ರಾರಂಭವಾಗುವ ಅಂಗಡಿ ಮುಗ್ಗಟ್ಟುಗಳು ಮುಚ್ಚಿರುವುದನ್ನು ಕಂಡು ಬಂದಿದೆ. ಸಾರ್ವಜನಿಕರ ತಿರುಗಾಟವೂ ಕಡಿಮೆಯಾಗಿದೆ. ಕೆಲವು ಪ್ರಯಾಣಿಕರು ಕೇಂದ್ರದ ಬಸ್ ನಿಲ್ದಾಣದ ಬಳಿ ಬಂದು ಬಸ್ಸಿಗಾಗಿ ಕಾಯುತ್ತಿದ್ದಾರೆ.
ನಗರದಲ್ಲಿ ಬೆಳಗಾಗುವ ಮುನ್ನವೇ ಕೆಲವು ಕಡೆ ಪ್ರತಿಭಟನೆ ನಡೆದಿದೆ. ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಅಂಬೇಡ್ಕರ್ ಅವರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
Next Story