ಕಲಬುರಗಿ | ದೇಶದ ಸ್ವಾತಂತ್ರ್ಯ ಚಳವಳಿಗೆ ಬಿರ್ಸಾ ಮುಂಡಾ ಕೊಡುಗೆ ಅಪಾರ : ಡಾ.ಶಿವಪ್ರಸಾದ್
ಸಿಯುಕೆಯಲ್ಲಿ ʼಜನಜಾತಿಯ ಗೌರವ್ ದಿನಾಚರಣೆʼ
ಕಲಬುರಗಿ : 'ಭಾರತೀಯ ಸ್ವಾತಂತ್ರ್ಯ ಚಳವಳಿಗೆ ಬಿರ್ಸಾ ಮುಂಡಾ ಅವರ ಕೊಡುಗೆ ಬಹಳ ಅನನ್ಯವಾಗಿದೆ" ಎಂದು ಹೈದರಾಬಾದ್ ವಿಶ್ವವಿದ್ಯಾಲಯದ ಮಾನವಶಾಸ್ತ್ರದ ವಿಭಾಗದ ಪ್ರಾಧ್ಯಾಪಕ ಡಾ.ಆರ್.ಶಿವ ಪ್ರಸಾದ್ ಹೇಳಿದ್ದಾರೆ.
ಆಳಂದ ತಾಲ್ಲೂಕಿನ ಕಡಗಂಚಿ ಬಳಿಯಿರುವ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ʼಜನಜಾತಿಯ ಗೌರವ ದಿನದ ಆಚರಣೆʼಯ ಸಂದರ್ಭದಲ್ಲಿ ಮಾತನಾಡಿದರು.
ಬಿರ್ಸಾ ಮುಂಡಾ ಜಾರ್ಖಂಡ್‌ನ ಮುಂಡಾ ಬುಡಕಟ್ಟು ಸಮುದಾಯಗಳ ಮಹಾನ್ ನಾಯಕ. ಅವರು ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಬುಡಕಟ್ಟು ಸಮುದಾಯಗಳನ್ನು ಒಗ್ಗೂಡಿಸಿ ಹೋರಾಡಿದವರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಿಯುಕೆಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ್ ಮಾತನಾಡಿ, ''ವಿದ್ಯಾರ್ಥಿಗಳು ನಮ್ಮ ನಾಡಿನ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯನ್ನು ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ನಾವು ನಮ್ಮ ದೇಶದಲ್ಲಿಯೇ ಗುಲಾಮರಾಗಿದ್ದೆವು. ನಮ್ಮ ಪೂರ್ವಜರು ಮಾಡಿದ ತ್ಯಾಗದಿಂದ ಇಂದು ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಬಿರ್ಸಾ ಮುಂಡಾ ಮತ್ತು ಅನೇಕ ಬುಡಕಟ್ಟು ನಾಯಕರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಿಯುಕೆ ಸಣ್ಣ ಭಾರತವಿದ್ದಂತೆ, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಲ್ಪಿಸಿದ ಸಮಾನತೆ, ಸಾಮರಸ್ಯ ಮತ್ತು ಬಲವಾದ ರಾಷ್ಟ್ರವನ್ನು ನಿರ್ಮಿಸಲು ನಾವೆಲ್ಲರೂ ಕೆಲಸ ಮಾಡಬೇಕು ಎಂದು ಹೇಳಿದರು.
ಪ್ರಭಾರಿ ಕುಲಸಚಿವ ಪ್ರೊ.ಚನ್ನವೀರ ಆರ್.ಎಂ., ಸಂಯೋಜಕ ಡಾ.ಡಿ.ಗೌತಮ್, ಪ್ರೊ.ವಿಜಯಕುಮಾರ್, ಪ್ರೊ.ಪಾಂಡುರoಗ ಪತ್ತಿ, ಡಾ.ಜೊಹೇರ್, ಡಾ.ಲಿಂಗದೇವರು, ಪ್ರೊ.ದೇವರಾಜ್ ಸೇರಿದಂತೆ ಎಲ್ಲಾ ಡೀನ್ಗಳು, ಮುಖ್ಯಸ್ಥರು, ಸಂಯೋಜಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.