ಕಲಬುರಗಿ: ಕಾಗಿಣಾ ನದಿಗೆ ಉರುಳಿದ ಕಾರು; ಚಾಲಕ ಮೃತ್ಯು
ಕಲಬುರಗಿ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಾಗಿಣಾ ನದಿಗೆ ಉರುಳಿಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ತಾಪುರ ತಾಲೂಕಿನ ದಂಡೋತಿ ಸಮೀಪ ರವಿವಾರ ರಾತ್ರಿ ನಡೆದಿರುವುದು ವರದಿಯಾಗಿದೆ. ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ.
ಚಿತ್ತಾಪೂರ ಪಟ್ಟಣದ ಬಹಾರಪೇಟ್ ನಿವಾಸಿ ಕಾರು ಚಾಲಕ ನಿಂಗಪ್ಪ ಪೂಜಾರಿ (50) ಮೃತಪಟ್ಟವರು. ಕೃಷ್ಣ ಮತ್ತು ಉಮೇಶ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮೂವರು ಸೇಡಂನಿಂದ ಚಿತ್ತಾಪುರಕ್ಕೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಈ ಕುರಿತು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story