ಕಲಬುರಗಿ | ಮಾಲಗತ್ತಿ ಗ್ರಾಪಂ ನೂತನ ಅಧ್ಯಕ್ಷರಾಗಿ ದೀಪಕ್ ಅವಿರೋಧ ಆಯ್ಕೆ
ಕಲಬುರಗಿ : ಶಹಾಬಾದ್ ತಾಲ್ಲೂಕಿನ ಮಾಲತ್ತಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಂಗಳವಾರ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದೀಪಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷರಾಗಿದ್ದ ಸದಾಶಿವ ತಿಪ್ಪಣ್ಣ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ದೀಪಕ ನಾಮಪತ್ರ ಸಲ್ಲಿಸಿದ್ದರು. ಪ್ರತಿ ಸ್ಪರ್ಧಿಯಾಗಿ ಯಾರು ನಾಮಪತ್ರ ಸಲ್ಲಿಸದ ಕಾರಣ ನೂತನ ಅಧ್ಯಕ್ಷರಾಗಿ ದೀಪಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾಲ್ಲೂಕು ತಹಶೀಲ್ದಾರ್ ಜಗದೀಶ ಚೌರ್ ತಿಳಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ತಾಪಂ ಸದಸ್ಯ ಏಲಿಸ್ ಬುಳ್ಳಾ, ಸಂಜು ಬೂಕರ್, ಮಲ್ಲಣ್ಣ ಅಲ್ಲೂರ್, ಬಸಪ್ಪ ಮೂಲಿಮನಿ, ಸ್ವಸ್ಥಿಕ್ ಭಂಡಾರಿ, ಶಂಕರ ಸಂಕನೂರ, ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ ಶರಣಪ್ಪ, ಸದಸ್ಯರಾದ ಅಂಬಿಕಾ ಶಿವಾನಂದ, ಮಲ್ಲಪ್ಪ ಮರಲಿಂಗಪ್ಪ, ಸದಾಶಿವ ತಿಪ್ಪಣ್ಣ, ವಿಜಯಕುಮಾರ ಗಿರಿಮಲ್ಲಪ್ಪ, ರಾಜು ಮಲ್ಲಪ್ಪ,ಹಣಮಂತ ಶರಣಪ್ಪ,ಸಕ್ರಿಬಾಯಿ ತಾರಾಸಿಂಗ, ಮಲ್ಲಪ್ಪ ಶಿವಶರಣಪ್ಪ, ಮಂಜುಳಾ ಭೀಮಯ್ಯ, ಶಿವಮ್ಮ ಮಹಾಲಿಂಗಪ್ಪ, ರಾಜೇಶ ಯನಗುಂಟಿಕರ್, ಶರಣು ಪಗಲಾಪೂರ ಸೇರಿದಂತೆ ಸಹಾಯಕ ಚುನಾವಣಾಧಿಕಾರಿಗಳಾದ ಗಂಗಾಧರ್, ರಾಜೇಂದ್ರ ಇತರರು ಇದ್ದರು.