ಕಲಬುರಗಿ | ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಕ್ಕೆ ಆಗ್ರಹ
ಕಲಬುರಗಿ : ಸಂಸತನಲ್ಲಿ ಡಾ.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಮಂತ್ರಿ ಅಮಿತಾ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರು (ಅಂಬೇಡ್ಕರ್ ವಾದ) ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತದಲ್ಲಿ ಅಮಿತ ಶಾ ಅವರ ಭಾವಚಿತ್ರ ದಹಿಸಿ ಸದನದಲ್ಲಿ ಅವರು ನೀಡಿರುವ ಹೇಳಿಕೆಯಿಂದ ಪ್ರಪಂಚವೇ ತಲೆ ತಗ್ಗಿಸುವಂತಹದ್ದಾಗಿದೆ. ಮೋದಿ ಮತ್ತು ಸಂಘ ಪರಿವಾರ ಸಂವಿಧಾನ ದುರ್ಬಲಗೊಳಿಸುವುದು ಮುನ್ನುಡಿಯಾಗಿದೆ. ಇಂತಹ ಹೇಳಿಕೆ ನೀಡಿರುವ ಅಮಿತ ಶಾ ತನ್ನ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಬೇಕು. ಇಲ್ಲದಿದ್ದರೆ ರಾಷ್ಟ್ರಪತಿಗಳು ಮಧ್ಯಸ್ಥಿಕೆ ವಹಿಸಿ ಆಮಿತ ಶಾ ಅವರನ್ನು ವಜಾ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿಯ ಸದಸ್ಯರಾದ ಅರ್ಜುನ್ ಭದ್ರೆ, ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಶರಣಬಸಪ್ಪ ಮಮಸೇಟ್ಟಿ, ಸ್ಲಂ ಜನಾಂದೋಲನದ ಸಂಚಾಲಕಿ ರೇಣುಕಾ ಸರಡಗಿ, ಸಂಜೀವಕುಮಾರ ಜವಳಕರ, ಬಾಬುರಾವ ಶೆಳ್ಳಗಿ, ಕಪೀಲ ಸಿಂಗೆ, ಮಾರುತಿ ಹುಳಗೋಳಕರ, ಸತೀಶ ಕೋಬಾಳಕರ, ವಿಜಯ ಕುಮಾರ್, ದೇವಿಂದ್ರಪ್ಪ ಕುಮಸಿ, ಪ್ರಿಯಾಂಕ್ ಮಾವಿನಕರ್, ಲವಿತ್ರಾ ವಸ್ತದ್ ಸೇರಿದಂತೆ ಮುಂತಾದವರು ಇದ್ದರು.