ಕಲಬುರಗಿ | ಸೇಡಂ ತಾಲೂಕು ಆಡಳಿತದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತೋತ್ಸವ

ಕಲಬುರಗಿ : ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತಿ ಪ್ರಯುಕ್ತ ಸೇಡಂ ತಾಲೂಕು ಆಡಳಿತದ ವತಿಯಿಂದ ಪಟ್ಟಣದ ರೈಲ್ವೆ ಸ್ಟೇಷನ್ ಎದುರುಗಡೆ ಇರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿ ಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿ ಹೂವಿನಿಂದ ಅಲಂಕಾರಗೊಂಡು ಜನರ ಗಮನ ಸೆಳೆದಿರುವುದು ಕಂಡು ಬಂದಿತು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರು ಪ್ರಭು ರೆಡ್ಡಿ, ತಹಶಿಲ್ದಾರ ಶ್ರೀಯಾಂಕ್ ಧನಶ್ರೀ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಿಜಯಕುಮಾರ್ ಪುಲಾರೆ, ಮ್ಯಾನೇಜರ್ ಸಂತೋಷ ಕುಮಾರ್ ಶಿಂಧೆ, ಸಹಾಯಕ ಕೃಷಿ ನಿರ್ದೇಶಕ ಹಂಪಣ ವಾಯ್ ಎಲ್, ಸಿಪಿಐ ಮಹಾದೇವ ದಿಡಿಮನಿ, ಪುರಸಭೆ ಅಧ್ಯಕ್ಷ ವೀರೇಂದ್ರ ರುದ್ನೂರ, ಪುರಸಭೆ ಮುಖ್ಯಾಧಿಕಾರಿ ಶರಣಯ್ಯ ಸ್ವಾಮಿ ಹಿರೇಮಠ, ಜೈ ಭೀಮ್ ಉಡಗಿ, ಸುನೀಲ್ ಕೋಳಿ, ಮಾರುತಿ ಹುಳಗೋಳಕರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚೆನ್ನಣ್ಣ ರಾಯಣ್ಣನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Next Story