ಕಲಬುರಗಿ | ಸನ್ನತಿಯಲ್ಲಿ ಎ.5 ರಂದು ಸಾಮ್ರಾಟ ಅಶೋಕ ಅವರ ಜಯಂತಿ ಆಚರಣೆ : ಅರ್ಜುನ ಭದ್ರೆ

ಕಲಬುರಗಿ : ಚಿತ್ತಾಪುರ ತಾಲ್ಲೂಕಿನ ಸನ್ನತಿಯಲ್ಲಿ ಎ.5 ರಂದು ಬೌದ್ಧ ಉಪಾಸಕ ಉಪಾಸಕಿಯರ ಸಂಘದ ವತಿಯಿಂದ ಸಾಮ್ರಾಟ ಅಶೋಕ ಅವರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೌದ್ಧ ಉಪಾಸಕ ಅರ್ಜುನ ಭದ್ರೆ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇರಿ ಅಂಬಲಗಾ ಬುದ್ದವಿಹಾರದ ಭಂತೆ ಬಿಕ್ಕುಣಿ ಸುಮನ್ ಸಾನಿಧ್ಯ ವಹಿಸುವರು, ಉಪಾಸಕ ಮರೆಪ್ಪ ಹಳ್ಳಿ ಅಧ್ಯಕ್ಷತೆ ವಹಿಸುವರು, ಅರ್ಜುನ ಭದ್ರೆ ಅವರು ಪ್ರಾಸ್ತವಿಕ ಮಾತುಗಳನ್ನು ಅಡುವರು, ಬುದ್ಧಗೋಷ ಗೋವಿಂದ ಹೆಗಡೆ ಪ್ರಮುಖವಾಗಿ ಭಾಷಣ ಮಾಡಲಿದ್ದಾರೆ. ಉಪಾಸಕರಾದ ಸೂರ್ಯಕಾಂತ ನಿಂಬಾಳಕರ್, ಹಣಮಂತ ಯಳಸಂಗಿ, ಬಸವರಾಜ ಬೆಣ್ಣೂರ, ಹಣಮಂತ ಬೋಧನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸಾವಿರ ಜನರು ಬರುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಬೌದ್ಧ ಉಪಾಸಕ ಹಣಮಂತ ಬೋಧನ ಮಾತನಾಡಿ, ಬಿಹಾರದ ಬೋಧ್ ಗಯಾದ ಮಹಾಬೋಧಿ ದೇವಾಲಯದ ಸಂಪೂರ್ಣ ಆಡಳಿತ ನಿಯಂತ್ರಣವನ್ನು ಬೌದ್ಧರಿಗೆ ಹಸ್ತಾಂತರ ಮಾಡಬೇಕು. ಹಾಗೂ 'ಹಿಂದೂಗಳಿಗೆ ಹಿಂದೂ ದೇವಸ್ಥಾನ, ಮುಸ್ಲಿಮರಿಗೆ ಮಸೀದಿ, ದರ್ಗಾಗಳ ಆಡಳಿತ ಇರುವಂತೆ ಬುದ್ಧರಿಗೆ ಬೌದ್ಧ ಕ್ಷೇತ್ರಗಳನ್ನು ನೀಡಬೇಕು' ಎಂದರು.
ಸುದ್ದಿಗೋಷ್ಠಿಯಲ್ಲಿ ಬೌದ್ಧ ಉಪಾಸಕರಾದ ಮರೆಪ್ಪ ಹಳ್ಳಿ, ಸೂರ್ಯಕಾಂತ ನಿಂಬಾಳಕರ್, ಹಣಮಂತ ಯಳಸಂಗಿ, ಶಾಂತಪ್ಪ ಕೂಡಲಗಿ, ಬಸವರಾಜ ಬೆಣ್ಣೂರ, ನವೀನ್ ಸೇರಿದಂತೆ ಇತರರು ಇದ್ದರು.