ಕಲಬುರಗಿ | ಗುಜರಿ ಅಂಗಡಿಯಲ್ಲಿ ಅಗ್ನಿ ಅವಘಡ : ಬೆಂಕಿ ನಂದಿಸಲು ಹರಸಾಹಸ

ಕಲಬುರಗಿ: ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಇರುವ ಗುಜರಿ ಅಂಗಡಿಗೆ ಭಾರೀ ಪ್ರಮಾಣದ ಬೆಂಕಿ ಹತ್ತಿಕೊಂಡು ಪಕ್ಕದ ಅಂಗಡಿಗಳಿಗೂ ಅಪಾರ ಹಾನಿಯನ್ನುಂಟು ಮಾಡಿರುವ ಘಟನೆ ಸೋಮವಾರ ನಡೆದಿದೆ.
ರಿಂಗ್ ರೋಡ್ ಪ್ರದೇಶದಲ್ಲಿ ಇರುವ ಇಂಡಸ್ಟ್ರಿಯಲ್ ಬಡಾವಣೆಯಲ್ಲಿ ಬಾಬಾ ಗುಜರಿ ಅಂಗಡಿಯ ಗೊಡಾನ್‌ಗೆ ಬೃಹತ್ ಬೆಂಕಿ ಅವಘಡ ಸಂಭವಿಸಿ, ಅಪಾರ ಪ್ರಮಾಣದ ಹಾನಿಯನ್ನುಂಟು ಆಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.
Next Story