ಕಲಬುರಗಿ | ಜ.10ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ಕಲಬುರಗಿ : ನಿವೃತ್ತ ಶಿಕ್ಷಣಾಧಿಕಾರಿ ದಿ.ಸಾಹೇಬಗೌಡ ಎಸ್.ಪಾಟೀಲ್ ಅವರ ಸ್ಮರಣಾರ್ಥವಾಗಿ ನಗರದ ಜಾಗೃತಿ ಕಾಲೋನಿಯಲ್ಲಿರುವ ಸಿಟಿ ನರ್ಸಿಂಗ್ ಹೊಮ್ ಆಸ್ಪತ್ರೆಯಲ್ಲಿ ಜ.10ರಂದು ಸಾರ್ವಜನಿಕರು ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬಹುದು ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.
ಆ ದಿನದಂದು ಬೆಳಗ್ಗೆ 9ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿವಿಧ ತಪಾಸಣೆಗಳನ್ನು ಮಾಡಿಸಿಕೊಳ್ಳಬಹುದು. ಅದರಲ್ಲಿ ಮೂಲವ್ಯಾಧಿ ಮತ್ತು ದೇಹದಲ್ಲಿ ಆಗಿರುವಂತಹ ಊತ, ಗಂಟುಗಳ ತಪಾಸಣೆಯನ್ನು ಖ್ಯಾತ ವೈದ್ಯ ಡಾ.ರಾಜಶೇಖರ್ ಪಾಟೀಲ್ ಅವರು ಮಾಡಲಿದ್ದಾರೆ. ಅದರಂತೆಯೇ ಮಹಿಳೆಯರ ರೋಗಗಳು, ಬಂಜೆತನ, ಪಿಸಿಓಡಿ ಕುರಿತಾಗಿ ತಪಾಸಣೆಯನ್ನು ಡಾ.ಸಂಗೀತಾ ಆರ್.ಪಾಟೀಲ್ ಅವರು ಮಾಡಲಿದ್ದಾರೆ.
ತಪಾಸಣೆಗೆಂದು ಬರುವ ಸಾರ್ವಜನಿಕರಿಗೆ ಉಚಿತ ರಕ್ತ ಪರಿಚಲನೆಯನ್ನು ಮಾಡಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾಹಿತಿಗಾಗಿ 8417658573, 9449399598 ಸಂಖ್ಯೆಗೆ ಸಂಪರ್ಕಿಸುವಂತೆ ಕೋರಲಾಗಿದೆ.
Next Story