ಕಲಬುರಗಿ | ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಮಳೆ; ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತ

ಕಲಬುರಗಿ : ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಧಾರಕಾರ ಮಳೆಯಾಗಿದ್ದರಿಂದ ಶನಿವಾರ ಸಂಜೆ ಚಿಂಚೋಳಿ ರಾಜ್ಯ ಹೆದ್ದಾರಿ ಪ್ರಯಾಣ ಸ್ಥಗಿತವಾಗಿರುವ ಘಟನೆ ನಡೆದಿದೆ.
ಸುಲೇಪೇಟ -ಕಲಬುರಗಿ ರಾಜ್ಯ ಹೆದ್ದಾರಿ ರಸ್ತೆ ಮೇಲೆ ದೊಡ್ಡ ಮರಗಳು ಉರುಳಿಬಿದ್ದ ಹಿನ್ನೆಲೆಯಲ್ಲಿ ಕೆಲವೆಡೆ ಸಂಚಾರ ಸ್ಥಗಿತವಾಗಿದೆ. ಸುಲೇಪೇಟ ಹಾಗೂ ಹೊಡೆಬಿರನಳ್ಳಿ ವ್ಯಾಪ್ತಿಯಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ.
ಚಿಂಚೋಳಿ ತಾಲ್ಲೂಕಿನ ಮೋನುನಾಯಕ್ ತಾಂಡಾದಲ್ಲಿ ಬಿರುಗಾಳಿಗೆ ಮನೆ ಮೇಲಿನ ಟಿನ್‌ಶೆಡ್ ಹಾರಿಹೋಗಿವೆ. ಹಾಗಾಗಿ ಮನೆಯಲ್ಲಿದ್ದ ದವಸ ಧಾನ್ಯಗಳು ಮಳೆಯಿಂದ ಸಂಪೂರ್ಣ ಹಾಳಾಗಿವೆ.
ಸಿಡಿಲು ಬಡಿದು ತಾಂಡಾದ ಹಲವು ಮನೆಗಳಿಗೆ ಹಾನಿಯಾಗಿವೆ ಎಂದು ತಿಳಿದುಬಂದಿದೆ.
Next Story