ಕಲಬುರಗಿ | ಗೋದುತಾಯಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ
ವಿದ್ಯಾರ್ಥಿಗಳಲ್ಲಿ ಕನಸ್ಸು ದೊಡ್ಡದಿರಲಿ: ಡಾ.ಶರಣಪ್ಪ
ಕಲಬುರಗಿ : ಪ್ರತಿಯೊಬ್ಬ ವಿದ್ಯಾರ್ಥಿಗಳು ಉನ್ನತ ಕನಸ್ಸು ಕಟ್ಟಿಕೊಂಡಿರಬೇಕು ಎಂದು ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಢಗೆ ಅವರು ಹೇಳಿದ್ದಾರೆ.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಕಲಾವಾಣಿ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶರಣಬಸವೇಶ್ವರ ಸಂಸ್ಥಾನ ಡಾ.ಅಲ್ಲಮಪ್ರಭು ದೇಶಮುಖ ಮಾತನಾಡಿ, ಪೂಜ್ಯ ಡಾ.ಅಪ್ಪಾ ಅವರ ದೂರದೃಷ್ಟಿ ಮತ್ತು ಅವರ ವಿಚಾರಗಳು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಈ ಭಾಗದ ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದಕ್ಕೆ ನೀವೆಲ್ಲ ಸಾಕ್ಷಿಯಾಗಿ ಬೆಳೆಯಬೇಕು. ಪೂಜ್ಯ ಡಾ.ಅಪ್ಪಾ ಮತ್ತು ಪೂಜ್ಯ ಡಾ.ಅವ್ವಾಜಿಯವರು ಮಹಿಳಾ ಸಬಲೀಕರಣಕ್ಕೆ ನಿರಂತರವಾಗಿ ಒತ್ತು ನೀಡುತ್ತಾ ಬಂದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕರಾದ ಡಾ.ನೀಲಾಂಬಿಕಾ ಶೇರಿಕಾರ, ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ, ಪ್ರಾಧ್ಯಾಪಕರಾದ ಡಾ.ಸೀಮಾ ಪಾಟೀಲ, ಡಾ.ಸಿದ್ದಲಿಂಗರೆಡ್ಡಿ, ಡಾ.ಎಂ,ಆರ್.ಹುಗ್ಗಿ, ಅನಿತಾ ಕನಶೆಟ್ಟಿ ಮತ್ತು ವಿದ್ಯಾರ್ಥಿನಿಯರು ಇದ್ದರು.
ಕಲಾವಾಣಿ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಶ್ರೀಮತಿ ಸಂತೋಷಿ ಶಿರವಾಳ ಸ್ವಾಗತಿಸಿದರು. ಕು.ಜವೇರಿಯಾ ಅಂಜುಮ್ ಮತ್ತು ಕು.ಸಾಧನಾ ನಿರೂಪಿಸಿದರೆ ಪ್ರಾಧ್ಯಾಪಕ ಪ್ರಸಾದ ಅಷ್ಟಗಿ ವಂದಿಸಿದರು. ಸಂಗೀತ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮಹಾವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.