ಕಲಬುರಗಿ | ಪಿಡಿಎ ಕಾಲೇಜಿನಲ್ಲಿ ʼವಿದ್ಯಾರ್ಥಿಗಳ ಕೌಶಲ್ಯ ಕಾರ್ಯಕ್ರಮʼ ಉದ್ಘಾಟನೆ
ಕಲಬುರಗಿ : ಎಡ್ಜುನೆಟ್ ಫೌಂಡೇಶನ್ ಸಹಯೋಗದೊಂದಿಗೆ ಹೈದರ್ ಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದಿನಿಂದ ಪ್ರಾರಂಭವಾಗಲಿರುವ 'ಬಿಲ್ಡಿಂಗ್ ಮಾಡರ್ನ್ ವೆಬ್ ಅಪ್ಲಿಕೇಶನ್ ಉಯಿಥ್ ಮರ್ನ ಸ್ಟಾಕ್' ಎಂಬ ವಿಷಯದ ವಿದ್ಯಾರ್ಥಿ ಕೌಶಲ್ಯ ತರಬೇತಿ ಕಾರ್ಯಾಗಾರವನ್ನು ಎಡ್ಜುನೆಟ್ ಪೌಂಡೇಶನ್ ನ ವಿಫುಲ್ ಕ್ಯಾಟೆ ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ.ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಸ ಪಾಟೀಲ್, ಆಡಳಿತ ಮಂಡಳಿ ಸದಸ್ಯರಾದ ಡಾ.ಶರಣಬಸಪ್ಪ ಹರವಾಳ, ಡಾ.ಕಿರಣ್ ದೇಶಮುಖ್, ಅರುಣಕುಮಾರ ಪಾಟೀಲ್, ಡಾ.ನಾಗೇಂದ್ರ ಮಂಠಾಳೆ, ಪ್ರಾಚಾರ್ಯರಾದ ಡಾ.ಎಸ್.ಆರ್.ಪಾಟೀಲ್, ಉಪಪ್ರಾಚಾರ್ಯರಾದ ಡಾ.ಎಸ್.ಆರ್.ಹೊಟ್ಟಿ, ಡಾ.ಭಾರತಿ ಹರಸೂರ, ಕಾರ್ಯಕ್ರಮ ಸಂಯೋಜಕರಾದ ಡಾ.ಪೂಜಾ ಅಸ್ಪಲ್ಲಿ, ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ.ನಾಗೇಶ್ ಸಾಲಿಮಠ, ಪ್ರೊ.ಅಕ್ಷಯ ಅಸ್ಪಲ್ಲಿ ಹಾಗೂ ಕಾಲೇಜಿನ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.