ಕಲಬುರಗಿ | ಇಲಾಖೆಗಳ ಭ್ರಷ್ಟಾಚಾರ ಖಂಡಿಸಿ ಅನಿರ್ದಿಷ್ಟಾವಧಿ ಧರಣಿ
ಕಲಬುರಗಿ : ಸ್ಥಳೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಭ್ರಷ್ಟಾಚಾರ ನಡೆದಿದೆ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು, ಟೆಂಡರ್ ಸಾಗಾಣಿಕೆದಾರರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಆಳಂದ ತಾಲ್ಲೂಕು ಆಡಳಿತಸೌಧದ ಮುಂದೆ ಸೋಮವಾರ ಕಲ್ಯಾಣ ಕರ್ನಾಟಕ ಕಲ್ಯಾಣ ಜನಪರ ವೇದಿಕೆಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ.
ಆಳಂದ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಾಲಾ ಮಕ್ಕಳ ಅಕ್ಷರ ದಾಸೋಹ ಯೋಜನೆಯ ಸರಬರಾಜು ಹಾಗೂ ಪಿ.ಎಮ್ ಪೋಷಣ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಕುರಿತು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಂಘಟಕರು ಆರೋಪಿಸಿದರು.
ಅಂಗನವಾಡಿ ಕೇಂದ್ರಕ್ಕೆ ವಿತರಣೆಯಾಗಬೇಕಾದ ಮೊಟ್ಟೆಗಳು ಸರಬರಾಜು ಮಾಡದೆ ಟೆಂಡರ್ ಸರಬರಾಜುದಾರರು ಸುಳ್ಳು ಬಿಲ್ಲುಗಳನ್ನು ಕಚೇರಿಗೆ ಸಲ್ಲಿಸಿ ಸರ್ಕಾರದ ಭೋಕ್ಕಸಕ್ಕೆ ಧಕ್ಕೆ ತಂದು ಅನುದಾನ ದರ್ಬಳಕೆ ಮಾಡಿಕೊಂಡಿರುವ ವಿ.ಕೆ ರಂಗರೇಜ ಮತ್ತು ಸನ್ಸ್ ಇವರಿಗೆ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಎಮ್.ಎಸ್.ಪಿ.ಸಿ ಗೋದಾಮಿನಿಂದ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಮಟ್ಟದ ಆಹಾರ ಸಾಗಾಣಿಕೆ ಮಾಡುತ್ತಿದ್ದಾರೆ ಮತ್ತು ಬಿಲ್ಲುಗಳಲ್ಲಿ ಕೂಡ ವ್ಯತ್ಯಾಸ ವಿರುವುದರಿಂದ ತಾಲ್ಲೂಕು ಎಮ್.ಎಸ್.ಪಿ.ಸಿ ಅವರ ವಿರುದ್ಧ ಕಠ್ಠಿಣ ಕ್ರಮ ಕೈಗೊಳ್ಳಬೇಕು. ಬಿಲ್ಲುಗಳಲ್ಲಿ ವ್ಯತ್ಯಾಸ ಮಾಡಿ ಸರಕಾರದ ಭೊಕ್ಕಸಕ್ಕೆ ಕತ್ತರಿಯನ್ನು ಹಾಕಿದ ಇವರ ಮೇಲೆ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಕಲ್ಯಾಣ ಕರ್ನಾಟಕ ಕಲ್ಯಾಣ ಜನಪರ ವೇದಿಕೆಯ ರಾಜಾಧ್ಯಕ್ಷ ಶರಣು ಕುಲ್ಕರ್ಣಿ, ರಾಜ್ಯ ಕಾರ್ಯದರ್ಶಿ ವೆಂಕಟೇಶ್ ರಾಥೋಡ್, ಉಪಾಧ್ಯಕ್ಷ ಜೈರಾಮ್ ರಾಥೋಡ, ರೈತ ಮೋರ್ಚಾ ಅಧ್ಯಕ್ಷ ಶರಣಬಸಪ್ಪ ಉಜಲಾಂಬೆ, ಹಿರಿಯ ಮಲ್ಲಿನಾಥ ಯಲಶೆಟ್ಟಿ, ವಿಕ್ರಮ, ಮಿಥುನ್ ರಾಥೋಡ್, ಶಾಂತಕುಮಾರ್ ಮಡಿವಾಳ. ಶರಣು ಘನುರೆ, ಶ್ರೀಕಾಂತ ಬಿರಾದಾರ, ಸಂತೋಷ್ ಆಡೆರೆ. ಪ್ರೇಮ ರಾಥೋಡ್, ನಿಖಿಲ್ ರಾಥೋಡ್, ರಾಜು ಚೌವಾಣ್, ಪ್ರವೀಣ್ ಬಿರಾದಾರ ಮತ್ತು ಸಾವನ್ ರಾಠೋಡ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.