ಕಲಬುರಗಿ | ಅಂತರ್ ಮಹಾವಿದ್ಯಾಲಯ ಟೇಬಲ್ ಟೆನ್ನಿಸ್; ವಿ.ಜಿ ವುಮೆನ್ಸ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಟ್ರೋಫಿ
ಕಲಬುರಗಿ : ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ರಾಯಚೂರಿನ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ʼಅಂತರ್ ಮಹಾವಿದ್ಯಾಲಯಗಳ ಟೇಬಲ್ ಟೆನ್ನಿಸ್ ಪಂದ್ಯಾವಳಿʼಯಲ್ಲಿ ಕಲಬುರಗಿ ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ವಿದ್ಯಾರ್ಥಿನಿಯರು ಫೈನಲ್ ಪಂದ್ಯವನ್ನು ಗೆದ್ದು ಟ್ರೋಫಿ ತಮ್ಮದಾಗಿಸಿಕೊಂಡರು.
ಟ್ರೋಫಿ ಗೆಲ್ಲುವಲ್ಲಿ ಉತ್ತಮ ಪ್ರದರ್ಶನ ನೀಡಿದ ವಿ.ಜಿ ವುಮೆನ್ಸ್ ಮಹಾವಿದ್ಯಾಲಯದ ಮೂರು ಜನ ವಿದ್ಯಾರ್ಥಿನಿಯರು ಯುನಿವರ್ಸಿಟಿ ಬ್ಲೂ ಆಗಿ ವಿಶ್ವವಿದ್ಯಾಲಯದ ತಂಡಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿಯರ ಈ ಸಾಧನೆಗೆ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ.ನಮೋಶಿ, ಉಪಾಧ್ಯಕ್ಷರಾದ ರಾಜಾ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಡಾ.ಕೈಲಾಶ್ ಪಾಟೀಲ್, ಕಾಲೇಜಿನ ಕನ್ವಿನರ್ ನಾಗಣ್ಣ ಘಂಟಿ ಹಾಗೂ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ಡಾ.ಮಹೇಶ ಗಂವ್ಹಾರ, ಡಾ.ಪ್ರೇಮಚಂದ್ ಚವ್ಹಾಣ, ಡಾ.ಮೋಹನರಾಜ ಪತ್ತಾರ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ. ಕಾಲೇಜಿನ ದೈಹಿಕ ಕ್ರೀಡಾ ನಿರ್ದೇಶಕರಾದ ಡಾ.ವಿಶ್ವನಾಥ ದೇವರಮನಿ ವಿದ್ಯಾರ್ಥಿನಿಯರಿಗೆ ತರಬೇತುದಾರರಾಗಿದ್ದಾರೆ.