ಕಲಬುರಗಿ | ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಯ ಬಂಧನ : ಸ್ವತ್ತು ಜಪ್ತಿ

ಬಂಧಿತ ಆರೋಪಿ
ಕಲಬುರಗಿ : ನಗರದ ಶರಣ ನಗರ ಆರ್ಟಿಓ ಕಚೇರಿ ಎದುರುಗಡೆ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಯೋರ್ವನನ್ನು ಬಂಧಿಸಿ, ಒಂದು ಮೊಬೈಲ್ ಮತ್ತು ನಗದು ಹಣವನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೇಡಂ ರಸ್ತೆಯ ಪ್ರಗತಿ ಕಾಲೋನಿಯ ನಿವಾಸಿ ಪ್ರಶಾಂತ್ ಸೋಮಶೇಖರ್ ಜೈನಶೆಟ್ಟಿ (28) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪ್ರಶಾಂತ್, ಶರಣ ನಗರ ಆರ್ಟಿಓ ಕಚೇರಿ ಸಮೀಪ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು, ಆತನ ಬಳಿ ಇದ್ದ 40,400 ರೂ. ನಗದು ಹಣ ಹಾಗೂ 1 ಮೊಬೈಲ್ ವಶಪಡಿಸಿಕೊಂಡಿದ್ಧಾರೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story