ಕಲಬುರಗಿ | 'ಜೈ ಭೀಮ್' ಎಂದರೆ ಮನುವಾದಿಗಳಿಗೆ ನಡುಕ ಹುಟ್ಟುತ್ತದೆ : ದಿವ್ಯಾ ಸುನೀಲ್

ಕಲಬುರಗಿ : ಸ್ವಾಭಿಮಾನ ಸರ್ವ ಧರ್ಮ ಸಮನ್ವಯ ಸಮಿತಿ ಸೇಡಂ ನೇತೃತ್ವದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ 134ನೇ ಜಯಂತೋತ್ಸವ ಆಚರಣೆ ಪ್ರಯುಕ್ತ ʼಸ್ವಾಭಿಮಾನ ಸಮಾವೇಶ ಕಾರ್ಯಕ್ರಮʼ ಬುಧವಾರ ನಡೆಯಿತು.
ಕಾರ್ಯಕ್ರಮದ ವಿಶೇಷ ಆಹ್ವಾನಿತ ಭಾಷಣಕಾರರಾಗಿ ಆಗಮಿಸಿದ ಮಹಾರಾಷ್ಟ್ರ ಮೂಲದ ದಿವ್ಯಾ ಸುನೀಲ್ ಅವರು ಮಾತನಾಡಿ, ದೇಶದೆಲ್ಲೆಡೆ ಅಂಬೇಡ್ಕರ್ ಹೆಸರು ಅಮರವಾಗಿದ್ದು, ಇಡೀ ಜೈ ಭೀಮ್ ಬಂಧುಗಳು ಒಗ್ಗಟ್ಟಿನಿಂದ ಜೈ ಭೀಮ್ ಎಂದು ಘೋಷಣೆ ಹಾಕಿದರೆ ಸಾಕು, ವಿಧಾನಸೌಧವೇ ನಡುಗುತ್ತೆ ಎಂದು ಹೇಳಿದರು.
ಅಂಬೇಡ್ಕರ್ ಬರೆದ ಸಂವಿಧಾನ ಮುಖಾಂತರವೇ ಕೇಂದ್ರದಲ್ಲಿ ಪ್ರದಾನ ಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರದಲ್ಲಿದ್ದಾರೆ ಎಂದು ಮರೆಯಬಾರದು ಎಂದರು.
ಸ್ವಾತಂತ್ರ್ಯವಾಗಿ ಬದುಕಲು ಅಂಬೇಡ್ಕರ್ ನೆರಳು ಇಡೀ ದೇಶಕ್ಕೆ ಪಸರಿಸಿದೆ, ಯಾವುದಕ್ಕೂ ಹೆದರದೆ ನಿರ್ಭಯದಿಂದ ಯುವಕರು ಅಂಬೇಡ್ಕರ್ ಕನಸು ನನಸಾಗುವ ಕೆಲಸ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ಅಣದೂರಿನ ಭಂತ್ಯೆ ವರಜ್ಯೋತಿ ಅವರು ಮಾತನಾಡಿ, ಅಮೆರಿಕ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಡೆಗಳಲ್ಲಿ ವಿಜೃಂಭಣೆಯಿಂದ ಡಾ.ಅಂಬೇಡ್ಕರ್ ರವರ ಜಯಂತೋತ್ಸವ ಆಚರಣೆಯನ್ನು ಒಂದು ವಾರದ ವರೆಗೆ ನಿರಂತರವಾಗಿ ಮಾಡಲಾಗುತ್ತದೆ, ದೇಶದಲ್ಲಿ ಅಂಬೇಡ್ಕರ್ ಹುಟ್ಟಿ ಬರದಿದ್ದರೆ ಮಹಿಳೆಯರು ತುಂಬ ಕಷ್ಟದಿಂದ ಬದುಕುವ ಪರಿಸ್ಥಿತಿ ಎದುರಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಮಾತನಾಡಿ, ಅಂಬೇಡ್ಕರ್ ರವರು ಒಂದೇ ಜಾತಿಗೆ ಸೀಮಿತವಾಗದೆ, ಬಹುಜನ ನಾಯಕರಾಗಿದ್ದಾರೆ. ಅದರ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕು ಎಂದರು.
ವೇದಿಕೆ ಮೇಲೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐದು ಜನ ಸಾಧಕರನ್ನು ಸನ್ಮಾನ ಮಾಡಲಾಯಿತು. ಬೆಳಗ್ಗೆ ಬಸವೇಶ್ವರ ವೃತ್ತದಿಂದ ಅಟೋ ಹಾಗೂ ಬೈಕ್ ಮೂಲಕ ಪ್ರಮುಖ ರಸ್ತೆಗಳ ಮೂಲಕ ಅಂಬೇಡ್ಕರ್ ಮೂರ್ತಿ ಅವರಣದ ವರೆಗೆ ಭವ್ಯ ಮೆರವಣಿಗೆ ಹಾಗೂ ಬಸವೇಶ್ವರ ದೇವಾಲಯದಿಂದ ಚೌರಸ್ತಾ ಕೀರಣಾ ಬಜಾರ್ ಮುಖಾಂತರ ಅಂಬೇಡ್ಕರ್ ಮೂರ್ತಿ ಅವರಣವರೆಗೆ ಮೆರವಣಿಗೆ ಜರುಗಿತ್ತು, ಡೊಳ್ಳು ಕುಣಿತ, ಹಲಗಿ ಬಾರಿಸುವ ಮೂಲಕ ಲಂಬಾಣಿ ಮಹಿಳೆಯರು ತೆಲೆ ಮೇಲೆ ಕುಂಭ ಎತ್ತಿಕೊಂಡು ಕುಣಿದು ಕುಪ್ಪಳಿಸಿದರು.
ಈ ಸಂದರ್ಭದಲ್ಲಿ ಹವಾ ಮಲ್ಲಿನಾಥ, ಬಸವರಾಜ ಆರ್ ಪಾಟೀಲ್ ಉಡಗಿ, ಪ್ರಕಾಶ ಅನ್ನಾರ, ಬಿಜೆಪಿ ಮುಖಂಡ ಶಿವಕುಮಾರ್ ಜಿಕೆ ಪಾಟೀಲ್ ತೆಲ್ಕೂರ, ಪುರಸಭೆ ಅಧ್ಯಕ್ಷ ವೀರೇಂದ್ರ ರೂದ್ನೂರ, ರಾಜಶೇಖರ್ ನಿಲಂಗಿ, ಗೀತಾ ಹೋಸಮನಿ, ಗೌತಮ್ ಬೋಮನ್ನಹಳ್ಳಿ ಚಿಂಚೋಳಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷೆ ಸುಮಾ ಎಲ್ ಚುಮಾನಚೋಡಕರ್, ಶರಣು ಮೇಡಿಕಲ್, ಸುನೀಲ್ ಹಳ್ಳಿ ಸ್ವಾಭಿಮಾನ ಸರ್ವ ಧರ್ಮ ಸಮನ್ವಯ ಸಮಿತಿ ಸಂಸ್ಥಾಪಕ ಓಂಪ್ರಕಾಶ್ ಪಾಟೀಲ್, ಶಿವಕುಮಾರ್ ತೆಟ್ನಳ್ಳಿ, ಶಂಭುಲಿಂಗ ನಾಟಿಕರ್, ಕಾಶಿನಾಥ್ ಮಡಿವಾಳ, ವೇಂಕಟಯ್ಯ ಮುಸ್ತಾಜರ್. ಮಂಜುನಾಥ್ ರೆಡಿ. ಬಾಲರಾಜ್ ಗುತ್ತೆದಾರ ಜೆಡಿಎಸ್ ಜಿಲ್ಲಾಧ್ಯಕ್ಷ. ವಿಜಯಕುಮಾರ್ ಆಡಕಿ, ನಾಗಪ್ಪ ಕೋಳ್ಳಿ ಕುರಕುಂಟಾ, ಲಕ್ಷ್ಮಿನಾರಾಯಣ ಚಿಮನಚೋಡಕರ್, ಅಶ್ವಿನಿ ಮದನಕರ್, ಡಾ. ಶ್ರೀನಿವಾಸ ಮುಕದಮ್ಮ್, ಸತೀಶ್ ಪುಜಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಜಾನಕಿ ಸೇಡಂ ನಿರೂಪಿಸಿದರು.