ಕಲಬುರಗಿ | ಕೃಷಿಕ ಸಮಾಜ ರೈತರ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿ : ರೇವಣಸಿದ್ಧಪ್ಪ ನಾಗೂರೆ
ಕಲಬುರಗಿ : ಸಂಕಷ್ಟದಲ್ಲಿರುವ ರೈತರಿಗೆ ಕೃಷಿಕ ಸಮಾಜವು ರೈತರ ಮತ್ತು ಇಲಾಖೆಯ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲು ಮುಂದಾಗಬೇಕು ಎಂದು ಶ್ರೀ ಮಹಾದೇವಲಿಂಗ ಟ್ರಸ್ಟ್ ಅಧ್ಯಕ್ಷ ರೇವಣಸಿದ್ಧಪ್ಪ ನಾಗೂರೆ ಅವರು ಅಭಿಪ್ರಾಯಪಟ್ಟರು.
ಆಳಂದ ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಸದ್ಯಸರಾಗಿ ಅವಿರೋಧವಾಗಿ ಆಯ್ಕೆಗೊಂಡಿರುವ ಮಹಾದೇವ ಎಸ್.ಹತ್ತಿ ಅವರಿಗೆ ಶ್ರೀ ಮಹಾದೇವಲಿಂಗ ಟ್ರಸ್ಟ್ ಕಮೀಟಿ, ಹತ್ಯಾನಗಲ್ಲಿ, ಆಳಂದ ವತಿಯಿಂದ ಹಮ್ಮಿಕೊಂಡ ಸನ್ಮಾನದಲ್ಲಿ ಹತ್ತಿ ಅವರಿಗೆ ಗೌರವಿಸಿ ಮಾತನಾಡಿದರು.
ಮಹಾದೇವ ಹತ್ತಿ ಅವರ ಸೇವೆ ಹಾಗೂ ಸಮರ್ಥತೆಯು ಗ್ರಾಮೀಣ ಕೃಷಿಕರಿಗೆ ಆಧಾರವಾಗಿದ್ದು, ಅವರು ನೀಡಿರುವ ನೇತೃತ್ವ ಸಮಿತಿಗೆ ಹೊಸ ದಿಕ್ಕು ತೋರಿಸಲಿದೆ. ಅವರ ಅವಿರೋಧ ಆಯ್ಕೆ ರೈತರೆಲ್ಲರ ಹಿತದೃಷ್ಟಿಯ ಸಂಕೇತವಾಗಿದೆ ಎಂದು ಶ್ಲಾಘಿಸಿದರು.
ಈ ಸನ್ಮಾನ ಸಮಾರಂಭದಲ್ಲಿ ಹಿರಿಯರಾದ ಶಂಕರರಾವ್ ಹತ್ತಿ, ಶ್ರೀಶೈಲ ಖಜೂರಿ, ಮಲ್ಲಿಕಾರ್ಜುನ ಬುಕ್ಕೆ, ಹಣಮಂತರಾವ ಪಾಟೀಲ ಮತ್ತು ಸೂರ್ಯಕಾಂತ ಪಾಟೀಲ ಇತರರು ಉಪಸ್ಥಿತರಿದ್ದರು.
Next Story