ಕಲಬುರಗಿ | ಗಣತಂತ್ರ ವ್ಯವಸ್ಥೆ ಬಲವರ್ಧನೆಗೆ ಜಾತಿ, ಮಥ ಪಂಥವನ್ನು ಬಿಟ್ಟು ಒಗ್ಗೂಡಿ : ಶಾಸಕ ಬಿ.ಆರ್.ಪಾಟೀಲ್

ಕಲಬುರಗಿ : ದೇಶದ ಗಣತಂತ್ರ ವ್ಯವಸ್ಥೆ ಬಲವರ್ಧನೆಗೆ ಜಾತಿ, ಮಥ ಪಂಥವನ್ನು ಬಿಟ್ಟು ಒಗ್ಗೂಡಿ ಸಮೃದ್ಧಿ ರಾಷ್ಟ್ರ ನಿರ್ಮಾಣಕ್ಕೆ ಸರ್ವರು ಕೈಜೋಡಿಸುವುದು ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಸಲಹೆಗಾರ, ಆಳಂದ್ ಶಾಸಕ ಬಿ.ಆರ್.ಪಾಟೀಲ ಅವರು ಕರೆ ನೀಡಿದರು.
ಆಳಂದ ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ರವಿವಾರ ತಾಲೂಕು ಆಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವದ ಸಾರ್ವಜನಿಕ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಬಳಿಕ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಾ.ಅಂಬೇಡ್ಕರ್ ಅವರು ಜಗತ್ತಿನ ಮೇಧಾವಿ ವ್ಯಕ್ತಿಯಾಗಿದ್ದರು. 34 ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಜಗತ್ತಿನಲ್ಲೇ ಇಬ್ಬರಲ್ಲಿ ಇವರೊಬ್ಬ ಮಾಸ್ಟರ್ ಆಫ್ಸೈನ್ಸ್ ಪದವಿ ಪಡೆದವರು. ಅವರು ಕೇವಲ ದಲಿತ, ಅಸ್ಪೃಶ್ಯರ ಚಿಂತನೆ ಸೀಮಿತವಾಗದೆ ದೇಶದ ರೈತರ, ಸಾಮಾನ್ಯ ಪ್ರಜೆಗಳ, ನೀರಾವರಿ, ವಿದ್ಯುತ್, ಮಹಿಳಾ ಸಮಾನತೆ, ಕಾರ್ಮಿಕರ ಹಿತ ಚಿಂತನೆ ಚರ್ಚೆಮಾಡಿ ಅತ್ಯುತ್ತಮ ಸಂವಿಧಾನ ನೀಡಿದ್ದಾರೆ ಎಂದು ಹೇಳಿದರು.
ಗಾಂಧೀಜಿವರ ಹೇಳಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸೌಲಭ್ಯ ದೊರೆಯಬೇಕೆಂದಿದ್ದಾರೆ. ಆದರೆ ಬಂಡವಾಳ ಶಾಹಿಗಳ ಕಪ್ಪಿಮುಷ್ಠಿಯಿಂದ ಇದನ್ನು ಹೊರತೆಗೆಯಬೇಕಾಗಿದೆ ಎಂದರು.
ತಮ್ಮ ಸರಕಾರದ ಪಂಚಗ್ಯಾರೆಂಟಿಗಳ ಜನತೆಗೆ ಲೋಕಾರ್ಪಣೆ ಮಾಡುವುದರೊಂದಿಗೆ, ಈ ವರ್ಷದಲ್ಲಿ ರೈತರಿಗೆ ಬೆಳೆಹಾನಿ ವಿಮೆ ಪರಿಹಾರದ ಅತಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತಿದೆ. ಇದು ರೈತರಿಗೆ ಬಹುಮುಖ ಉಪಕಾರಿಯಾಗಲಿದೆ ಎಂದು ಹೇಳಿದರು.
ತಾಪಂ ಇಒ ಮಾನಪ್ಪ ಕಟ್ಟಿಮನಿ, ಸರಕಾರಿ ಬಾಲಕಿಯರ ಪಿಯು ಕಾಲೇಜಿನ ಉಪನ್ಯಾಸಕಿ ಶರಣಮ್ಮ ಡಿ.ಗೌರಸೆ, ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಮಾತನಾಡಿದರು.
ಸಿಆರ್ಪಿ ವಿರೇಶ ಬೋಳಶೆಟ್ಟಿ ನಿರೂಪಿಸಿದರು. ಶಿಕ್ಷಣ ಸಂಯೋಜಕ ಶ್ರೀಮಂತ ಪಾಟೀಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಪಂಚ ಗ್ಯಾರೆoಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ, ಡಿವೈಎಸ್ಪಿ ಗೋಪಿಬಿ.ಆರ್.ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನ್ನಶೆಟ್ಟಿ, ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ, ಪಿಡಬ್ಲೂಡಿ ಎಇಇ ಆನಂದ, ಕ್ಷೇತ್ರ ಶಿಕ್ಷಣಾಧಿಕಾರಿ ಋಷಿಕೇಶ ದಂತಕಾಳೆ, ಸಿಡಿಪಿಒ ಶ್ರೀಕಾಂತ ಮೇಂಗಜಿ, ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ, ಸಮಾಜ ಕಲ್ಯಾಣಾಧಿಕಾರಿ ವಿಜಯ ಲಕ್ಷ್ಮಿ ಹೋಳ್ಕರ್, ಮತ್ತಿತರರು ವೇದಿಕೆಯಲ್ಲಿ ಇದ್ದರು.
ನಿವೃತ್ತ ವೈದ್ಯ ಡಾ.ಎ.ಎಂ.ಬುಜುರ್ಕೆ, ದಯಾನಂದ ಶೇರಿಕಾರ, ಪ್ರಕಾಶ ಮೂಲ ಭಾರತಿ, ಅಬ್ದುಲ್ ಸತ್ತಾರ್ ಮುರುಮಕರ್, ಸುಲೇಮಾನ ಮುಕುಟ್, ಬಾಬುರಾವ್ ಮಡ್ಡೆ ಸೇರಿದಂತೆ ನಾಗರಿಕರು, ವಿವಿಧ ಶಾಲೆಗಳು, ಶಿಕ್ಷಕರು ನಾಗರಿಕರು ಪಾಲ್ಗೊಂಡಿದ್ದರು. ನಂತರ ಶಾಲೆಗಳ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.