ಕಲಬುರಗಿ | ಬ್ರಿಡ್ಜ್ ಮೇಲಿಂದ ಬಿದ್ದ ಲಾರಿ : ಎರಡು ದಿನದ ಬಳಿಕ ಚಾಲಕನ ಮೃತದೇಹ ಪತ್ತೆ
ಕಲಬುರಗಿ : ಇಟಗಾ ಮತ್ತು ಗಾಣಗಾಪುರ್ ಮಧ್ಯೆ ಇರುವ ಬ್ರಿಡ್ಜ್ ಮೇಲಿಂದ ಕಬ್ಬಿನ ಲಾರಿಯೊಂದು ಭೀಮಾ ನದಿಯ ನೀರಿನಲ್ಲಿ ಬಿದ್ದು, ನಾಪತ್ತೆಯಾಗಿದ್ದ ಲಾರಿ ಚಾಲಕನ ಮೃತದೇಹ ಎರಡು ದಿನಗಳ ಬಳಿಕ ಪತ್ತೆಯಾಗಿದೆ.
ಸಂಗಾವಿ ಮೂಲದ ಪರಮೇಶ್ವರ್ ಧೋತ್ರೆ (35) ಮೃತ ಲಾರಿ ಚಾಲಕ ಎಂದು ಗುರುತಿಸಲಾಗಿದೆ. ಈ ಘಟನೆ ಕಳೆದ ಸೋಮವಾರ ರಾತ್ರಿ 12 ರಿಂದ 1 ರ ಒಳಗೆ ನಡೆದಿರಬಹುದು ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ನದಿಗೆ ಬಿದ್ದಿದ್ದ ಲಾರಿಯನ್ನು ಮೇಲಕ್ಕೆ ಎತ್ತುವ ಕಾರ್ಯದಲ್ಲಿ ಅಗ್ನಿಶಾಮಕ ದಳ ಮತ್ತು ಅಲ್ಲಿನ ಪೊಲೀಸರು ತೊಡಗಿದ್ದರು. ಇದೀಗ ಎರಡು ದಿನದ ನಂತರ ಲಾರಿ ಮತ್ತು ಅದರ ಚಾಲಕನನ್ನು ಹೊರ ತೆಗೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆಯ ಕುರಿತು ಗಾಣಗಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Next Story