ಕಲಬುರಗಿ | ಅಲ್ಪಸಂಖ್ಯಾತರ ಮುಖಂಡರೊಂದಿಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಸಭೆ
ಮುಂಬರುವ ಆರ್ಥಿಕ ಸಾಲಿನ ಆಯವ್ಯಯದಲ್ಲಿ ಅವಶ್ಯಕವಾದ ವಿಷಯಗಳ ಬಗ್ಗೆ ಚರ್ಚೆ
ಕಲಬುರಗಿ : ಮುಂಬರುವ ಆರ್ಥಿಕ ಸಾಲಿನ ಆಯವ್ಯಯದಲ್ಲಿ ಅವಶ್ಯಕವಾದ, ಬೌದ್ಧ ಜ್ಞಾನ ಮಂದಿರ, ಹಳೆಯ ಸ್ಮಾರಕಗಳ ರಕ್ಷಣೆ, ಚರ್ಚ್ಗಳ ದುರಸ್ಥಿಕರಣ ಕ್ರಿಶ್ಚನರ್ ಪ್ರವರ್ಗ-1 ರ ಪತ್ರ ನೀಡುವ ಕುರಿತು ಅನೇಕ ವಿಷಯಗಳ ಬಗ್ಗೆ ಆಯಾ ಸಮುದಾಯದ ಮುಖಂಡರಿಂದ ಅವಹಾಲು ಮನವಿಯನ್ನು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್ ಸ್ವೀಕರಿಸಿದರು.
ಸೋಮವಾರದಂದು ಹಳೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಸಿಗೆ ನೀರೆರೆಯುವ ಮೂಲಕ ಸಮುದಾಯದ ಮುಖಂಡರು ಹಾಗೂ ಧರ್ಮಗುರುಗಳ ಜೊತೆಯಲ್ಲಿ ಉದ್ಫಾಟಿಸಿದರು.
ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಕಲಬುರಗಿ ಜಿಲ್ಲೆಗಳಿಂದ ಎಲ್ಲಾ ಅಲ್ಪಸಂಖ್ಯಾತರ ಸಮುದಾಯಗಳ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್, ಜೈನ್ ಹಾಗೂ ಪಾರ್ಸಿ ಸಮುದಾಯದ ಮುಖಂಡರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ಅಧ್ಯಕ್ಷರ ಮುಂದೆ ತಿಳಿಸಿದರು.
ಆರ್ಥಿಕ ಸಾಲಿನ ಆಯವ್ಯಯದಲ್ಲಿ ಅವಶ್ಯಕವಾದ ಸುಸರ್ಜಿತ ಆಸ್ಪತ್ರೆ, ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಮೌಲಾನಾ ಆಝಾದ್ ಮಾದರಿ ಶಾಲೆಗಳಲ್ಲಿ ತರಗತಿ ಪ್ರಾರಂಭಿಸುವ ಈ ಭಾಗದ ಕುರಿತು ಹಲವು ವಿಷಯಗಳ ಬಗ್ಗೆ ಆಯಾ ಸಮುದಾಯದ ಮುಖಂಡರಿಂದ ಐ.ಎ.ಎಸ್. ಕೋಚಿಂಗ್ ಸೆಂಟರ್ ಬಗ್ಗೆ ಹಲವಾರು ಸ್ಕೀಮ್ ಗಳ ಬಗ್ಗೆ ತರಬೇತಿಗಳ ಬಗ್ಗೆ ಚರ್ಚಿಸಿದರು.
ವೇದಿಕೆ ಮೇಲೆ ಅಲ್ಪಸಂಖ್ಯಾತರ ಬೆಂಗಳೂರಿನ ಆಯೋಗದ ವಿಶೇಷಾಧಿಕಾರಿ ಮುಜಿಬುಲ್ಲಾ ಜಫಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಾವಿದ್ ಕೆ.ಕರಂಗಿ ವಕ್ಪ್ ಅಧಿಕಾರಿ ಹಜರತ್ ಅಲಿ, ಕೆಎಮ್ಡಿಸಿ ಅಧಿಕಾರಿ ರವಿ ಬೆಹರೆ ಸೇರಿದಂತೆ ಕಲಬುರಗಿ ವಿಭಾಗದ ಎಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು, ಜಿಲ್ಲಾ ವಕ್ಪ್ ಅಧಿಕಾರಿಗಳು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಎಲ್ಲಾ ಜಿಲ್ಲಾ ವ್ಯವಸ್ಥಾಪಕರು ಹಾಗೂ ಧರ್ಮಗುರುಗಳು, ಸಮಾಜದ ಮುಖಂಡರು ಭಾಗವಹಿಸಿದ್ದರು.