ಕಲಬುರಗಿ | ಬ್ಯಾನರ್ ನಲ್ಲಿ ಹೆಸರು ಕೈ ಬಿಟ್ಟಿದ್ದಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ್ ಬೆಂಬಲಿಗರಿಂದ ಪ್ರತಿಭಟನೆ
ಕಲಬುರಗಿ: ಇಂದು ಕಲಬುರಗಿ ನಗರದಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ ಉದ್ಘಾಟನೆ ಕಾರ್ಯಕ್ರಮದ ನಾಮಫಲಕದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಮತ್ತು ಸ್ಥಳೀಯ ಶಾಸಕರ ಭಾವಚಿತ್ರ ಮತ್ತು ಹೆಸರು ಕೈಬಿಟ್ಟಿದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಶಾಸಕರ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಬೆಂಬಲಿಗರ ಮುಖಂಡರಾದ ಲಿಂಗರಾಜ್ ಕಣ್ಣಿ ಅವರು ಜಯದೇವ ಆಸ್ಪತ್ರೆಯ ಆಡಳಿತ ವ್ಯವಸ್ಥಾಪಕ ಅಧಿಕಾರಿಗಳಿಗೆ ಶಾಸಕರ ಭಾವಚಿತ್ರ ಮತ್ತು ಹೆಸರು ಕೈಬಿಡಲಾಗಿದ್ದು, ಶಾಸಕರನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಭೀಮಾಶಂಕರ ಬಿಲಗುಂದಿ, ಅವಿನಾಶ್ ಭಾಷ್ಗರ್, ಮಹೇಶ್ ತೆಲೂರಕರ್, ಸಂಜುಕುಮಾರ್, ಚನ್ನಬಸವ, ಭೀಮು ಪೂಜಾರಿ ಸೇರಿದಂತೆ ಹಲವಾರು ಬೆಂಬಲಿಗರು ಹಾಜರಿದ್ದರು.
Next Story