ಕಲಬುರಗಿ | ಪುರಾತನ ಕಾಲದಲ್ಲಿ ನಾಗಾವಿ ನಾಡು ಸಾಂಸ್ಕೃತಿಕವಾಗಿ ಪ್ರಸಿದ್ಧ: ತಹಶೀಲ್ದಾರ್ ಹಿರೇಮಠ್
ಕಲಬುರಗಿ : ಪುರಾತನ ಕಾಲದಲ್ಲಿ ನಾಗಾವಿ ಪ್ರಸಿದ್ದಿ ಪಡೆದ ವಿಶ್ವವಿದ್ಯಾಲಯವಾಗಿತ್ತು ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ್ ಅವರು ಹೇಳಿದ್ದಾರೆ.
ಚಿತ್ತಾಪುರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಾಗಾವಿ ಸಾಂಸ್ಕ್ರತಿಕ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡ ಕರ್ನಾಟಕ ರಾಜೋತ್ಸವ ಸಾಂಸ್ಕ್ರತಿಕ ಸಂಭ್ರಮ ಹಾಗೂ ನಾಗಾವಿ ನಾಡಿನ ಸಾಂಸ್ಕ್ರತಿಕ ರತ್ನ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಭಾರತದಲ್ಲಿ ನಳಂದಾ, ತಕ್ಷಶಿಲಾ, ವಿಶ್ವವಿದ್ಯಾಲಯ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ನಾಗಾವಿ ಘಟಿಕಸ್ಥಾನ ಹೆಸರಿನಲ್ಲಿ ಪ್ರಸಿದ್ದಿ ಪಡೆದ ವಿಶ್ವವಿದ್ಯಾಲಯವಾಗಿತ್ತು ಎಂದರು.
ಈ ವಿಶ್ವವಿದ್ಯಾಲಯದಲ್ಲಿ ವೇದ, ಶಾಸ್ತ್ರ, ತರ್ಕಶಾಸ್ತ್ರ, ಪುರಾಣ, ನ್ಯಾಯಶಾಸ್ತ್ರ ಅಧ್ಯಯನ ನಡೆಯುತ್ತಿತು. ಹಾಗೂ ನಾಗಾವಿಯಲ್ಲಿ ಇರುವ ಪುರಾತನ ಸ್ಮಾರಕಗಳು, ಶಾಸನಗಳು, ಅವಶೇಷಗಳು ಶಿಲ್ಪಕಲೆಗಳಿಂದ ನಾಗಾವಿ ನಾಡು ಪುರಾತನ ಕಾಲದಿಂದ ಸಾಂಸ್ಕ್ರತಿಕ ಶ್ರೀಮಂತ ನಾಡಾಗಿತ್ತು ಎಂದು ಅವರು ಹೇಳಿದರು.
ವಿವಿಧ ಕ್ಷೇತ್ರದ ಸಾಧಕರಾದ ಮಹಾದೇವಿ ಭೀಮಾಶಂಕರ್ ಕೊಲ್ಲೂರ್ ( ಜಾನಪದ ಕ್ಷೇತ್ರ), ಶೈಲಶ್ರೀ (ಶಿಕ್ಷಣ ಕ್ಷೇತ್ರ), ವಿಕ್ರಮ್ ತೇಜಸ್ ವಾಡಿ (ಸಾಹಿತ್ಯ ಸಂಘಟಕ), ಮಲ್ಲಿಕಾರ್ಜುನ್ ಮುಡಬೂಳಕರ್ (ಮಾಧ್ಯಮ ಕ್ಷೇತ್ರ), ಬೀಮಶೇನ್ ಭೀಮನಹಳ್ಳಿ (ಕೃಷಿ ಕ್ಷೇತ್ರ) ಅವರಿಗೆ ನಾಗಾವಿ ನಾಡಿನ ಸಾಂಸ್ಕ್ರತಿಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಭೀಮಣ್ಣ ಸಾಲಿ, ಸರಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜ್ ಬಳೊಂಡಿಗಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ರವೀಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಿರಾದಾರ್, ತಾಲ್ಲೂಕು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ್ ನಾಲವಾರ್, ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕ ಅಮೃತ್ ಕ್ಷೀರಸಾಗರ್, ಕನ್ನಡ ಸಾಹಿತ್ಯ ಪರಿಷತ್ ವಾಡಿ ವಲಯ ಅಧ್ಯಕ್ಷ ಸಿದ್ದಯ್ಯ ಶಾಸ್ತ್ರಿ, ಮಲ್ಲೇಶ್ ನಾಟಿಕಾರ್, ಕ್ಷೇಮಲಿಂಗ ವಾಡಿ, ಮಡಿವಾಳಪ್ಪ ಹೇರೂರು, ದಯಾನಂದ್ ಖರ್ಜರಿ, ವಿರುಪಾಕ್ಷಿ ರುದ್ರ ಬೆಣ್ಣಿ, ಸಂತೋಷ್ ಕಟ್ಟಮನಿ, ವಿಶ್ವರಾದ್ಯ ಕರದಾಳ್, ಶಿಕ್ಷಕರಾದ ಶರಣಪ್ಪ ಐಕೂರ್, ಸಾಬಣ್ಣ, ಸುರೇಶ್, ಅಂಬಣ್ಣ, ಶಿಕ್ಷಕಿಯರಾದ ಶಿವಲೀಲಾ, ಬೇಬಿ ಬಿರಾದಾರ್, ಜಯಶ್ರೀ, ವಿಜಯಲಕ್ಷ್ಮಿ, ರಾಮಲಿಂಗಪ್ಪ ಪ್ಯಾಟಿ ಮುಂತಾದವರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಲಿಂಗಣ್ಣ ಮಲ್ಕನ್ ಅವರು ಸ್ವಾಗತಿಸಿದರು. ಕಾರ್ಯದರ್ಶಿ ನರಸಪ್ಪ ಚಿನ್ನಕಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಬಸವರಾಜ್ ಹೊಟ್ಟಿ ಅವರು ವಂದಿಸಿದರು.