ಕಲಬುರಗಿ | ಆಳಂದ ತಾಲ್ಲೂಕಿನ ನಿಂಬರ್ಗಾ ತಾಂಡಾದಲ್ಲಿ ಮತ್ತೆ 44.5 ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು

ಸಾಂದರ್ಭಿಕ ಚಿತ್ರ
ಕಲಬುರಗಿ : ಆಳಂದ ತಾಲ್ಲೂಕಿನ ಹೋಬಳಿಯಾಗಿರುವ ನಿಂಬರ್ಗಾ ತಾಂಡಾ ಮತ್ತು ಬೀದರ್ ಜಿಲ್ಲೆಯ ದಬಕ ಹೋಬಳಿಯಲ್ಲಿಅತಿ ಹೆಚ್ಚು 44.5°C ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬೀದರ್ ಮತ್ತು ಕಲಬುರಗಿ ಜಿಲ್ಲೆ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಕೆಲವು ಸ್ಥಳಗಳು, ವಿಜಯಪುರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳು ರಾಜ್ಯದಾದ್ಯಂತ 40°C ಮತ್ತು ಅದಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನವನ್ನು ದಾಖಲಿಸಿವೆ ಎಂದು ಹೇಳಿದೆ.
KSNDMC ಹವಾಮಾನ ಮೇಲ್ವಿಚಾರಣಾ ಜಾಲದ ಪ್ರಕಾರ, ಬೀದರ್ ಮತ್ತು ಕಲಬುರಗಿ ಜಿಲ್ಲೆಯ ತಲಾ 10 ಸ್ಥಳಗಳು, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ತಲಾ 6 ಸ್ಥಳಗಳು ಮತ್ತು ವಿಜಯಪುರ ಜಿಲ್ಲೆಯ 1 ಸ್ಥಳವು ರಾಜ್ಯದಾದ್ಯಂತ 40°C ಮತ್ತು ಅದಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನವನ್ನು ದಾಖಲಾಗಿದೆ ಎಂದು ಇಲಾಖೆ ತಿಳಿಸಿದೆ.
ಕಳೆದ ವಾರವಷ್ಟೇ ಇದೇ ನಿಂಬರ್ಗಾ ತಾಂಡಾದಲ್ಲಿ 43.6 ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಈಗ ಅದರ ಗರಿಷ್ಠ ದಾಖಲೆಯನ್ನು ಮುರಿದಿದೆ.
Next Story