ಕಲಬುರಗಿ | ನಾಳೆ ಕವಿಗೋಷ್ಠಿ, ಸಂಗೀತ ಸಂಭ್ರಮ, ರಾಜ್ಯೋತ್ಸವ ಪ್ರಶಸ್ತಿ ಪ್ರದಾನ : ಬಿ.ಎಚ್.ನಿರಗುಡಿ
ಕಲಬುರಗಿ : ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕವಿಗೋಷ್ಠಿ, ಸಂಗೀತ ಸಂಭ್ರಮ ಹಾಗೂ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಾಳೆ(ನ.18) ಸಂಜೆ 4ಗಂಟೆಗೆ ನಗರದ ಅನ್ನಪೂರ್ಣ ಕ್ರಾಸ್ನಲ್ಲಿರುವ ಕಲಾಮಂಡಳದಲ್ಲಿ ನಡೆಯಲಿದೆ ಎಂದು ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಬಿ.ಎಚ್. ನಿರಗುಡಿ ತಿಳಿಸಿದ್ದಾರೆ.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀನಿವಾಸ್ ಸರಡಗಿಯ ಪೂಜ್ಯ ಡಾ.ರೇವಣಸಿದ್ದ ಶಿವಾಚಾರ್ಯರು ವಹಿಸುವರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಸಿದ್ದರಾಮ ಹೊನ್ನಲ್ ಅವರು ಉದ್ಘಾಟಿಸುವರು. ಜೆಡಿಎಸ್ ಜಿಲ್ಲಾ ವಕ್ತಾರರಾದ ದೇವೇಗೌಡ ತಲ್ಲೂರ ಅವರು ಪ್ರಶಸ್ತಿ ವಿತರಣೆ ಮಾಡುವರು, ಶಿವಾನಂದ ಖಜೂರ್ಗಿ ಅವರು ತಾಯಿ ಭುವನೇಶ್ವರಿ ಫೋಟೋ ಪೂಜೆ ನೇರವೇರಿಸುವರು ಎಂದರು.
ಸುರೇಶ ಬಡಿಗೇರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಹೇಶ ಹೊಸೂರಕರ್, ದತ್ತಪ್ಪ ಸಾಗನೂರ, ಬಸವರಾಜ ಬಿರಾಜದಾರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಬಿ.ಎಚ್. ನಿರಗುಡಿ ಉಪಸ್ಥಿತರಿರಲಿದ್ದಾರೆಂದು ತಿಳಿಸಿದರು.
ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕವಿಗಳಾದ ಮಂಗಲಾ ಕಪರೆ, ಡಾ.ಸಂಗಣ್ಣ ಸಿಂಗೆ, ಗಂಗಮ್ಮ ನಾಲವಾರ, ರಾಜೇಂದ್ರ ಝಳಕಿ, ಪರ್ವಿನ್ ಸುಲ್ತಾನಾ, ಅಂಬಾರಾಯ ಮಡ್ಡೆ, ರಾಜು ಉದನೂರ, ರೇಣುಕಾ ಹೇಳವರ, ರಾಹುಲ ಕಟ್ಟಿ, ಶಿವಯ್ಯ ಮಠಪತಿ, ಪರಮಾನಂದ ಎಸ್. ಸರಸಂಬಿ, ಸಾಗರ ವಾಘಮೋರೆ ಅವರು ಕವನ ವಾಚನ ಮಾಡಲಿದ್ದಾರೆ.
2024ನೇ ಸಾಲಿನ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ :
ಡಾ.ಸಿದ್ದಮ್ಮ ಗುಡೇದ, ಡಾ.ಪುಟ್ಟಮಣಿ ದೇವಿದಾಸ, ಪ್ರೊ.ಯಶವಂತರಾಯ ಅಷ್ಠಗಿ, ರೇಣುಕಾ ಡಾಂಗೆ, ಸೋಮಪ್ಪ ಬಣಗಾರ, ಚಂದ್ರಕಾಂತ ಕರ್ಜಗಿ, ಸಿದ್ದಯ್ಯಶಾಸ್ತ್ರಿ ನಂದೂರಮಠ, ತೀರ್ಥಕುಮಾರ ಬೆಳಕೋಟಾ, ಗೋಪಾಲ ಕುಲಕರ್ಣಿ, ಚಂದ್ರು ಹೀರೆಮಠ, ಭೀಮಾಶಂಕರ್ ಫಿರೋಜಾಬಾದ, ಸಂತೋಷ ಜಿ. ನಾಡಗಿರಿ, ಪರಮೇಶ್ವರ ದುಗುಂಡ, ಶಿವು ದೊಡ್ಡಮನಿ, ಮಲ್ಲಣ್ಣಗೌಡ ಎಸ್. ಪಾಟೀಲ, ವೈಜನಾಥ ತಡಕಲ್, ಅನೀಲಕುಮಾರ ಸಕ್ತಿ, ರಾಜಶೇಖರ ಗೊಣಗಿ, ಡಾ. ಎಸ್.ಎಸ್. ಭಕ್ತಕಂಟಾರ, ಗಿರೀಶ ತುಂಬಗಿ ಮಲ್ಲಿಕಾರ್ಜುನ ಆಲಮೇಲ್ ಅವರಿಗೆ ಪ್ರತಿಷ್ಠಾನ ಕಡೆಯಿಂದ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.