ಕಲಬುರಗಿ: ದಾಖಲೆ ರಹಿತ 30 ಲಕ್ಷ ನಗದು, 2 ಲಕ್ಷ ಮೌಲ್ಯದ ಸೀರೆಗಳು ಪೊಲೀಸ್ ವಶ
ಕಲಬುರಗಿ: ಕಾರಿನಲ್ಲಿ ಸಾಗಿಸುತ್ತಿದ್ದ 30 ಲಕ್ಷ ರೂ.ಗಳು ಹಾಗೂ ಎರಡೂವರೆ ಲಕ್ಷ ರೂ.ಗಳ ಮೌಲ್ಯದ ಸೀರೆಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಸೇಡಂ ತಾಲ್ಲೂಕಿನ ಮುಧೋಳ್ ಪೋಲಿಸ್ ಠಾಣೆಯ ವ್ಯಾಪ್ತಿಯ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.
ಕಾರಿನಲ್ಲಿದ್ದವರ ಮಾಹಿತಿಯ ಪ್ರಕಾರ ಕಾರಿನಲ್ಲಿ ಹಣ ಹಾಗೂ ಸೀರೆಗಳನ್ನು ತೆಲಂಗಾಣದ ನಾರಾಯಣಪೇಟ್ ಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿ ದೆ. ಯಾವುದೇ ದಾಖಲೆಗಳು ಇರದೇ ಇದ್ದುದರಿಂದ ಹಣ ಹಾಗೂ ಸೀರೆಗಳನ್ನು ಪೋಲಿಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮುಧೋಳ್ ಪೋಲಿಸ್ ಠಾಣೆಯ ಪಿಎಸ್ಐ ದೌಲತ್. ಕೆ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Next Story