ಕಲಬುರಗಿ | ಎ.13 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಸಾಂದರ್ಭಿಕ ಚಿತ್ರ
ಕಲಬುರಗಿ : ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ಕೆಳಕಂಡ ಫೀಡರ್ ಗಳ ವ್ಯಾಪ್ತಿಯಲ್ಲಿನ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ಎ.13ರಂದು ರವಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.
ಸರಾಫ್ ಬಝಾರ್ ಫೀಡರ್ :
ಸರಾಫ್ ಬಝಾರ್, ಕ್ಲಾಥ್ ಬಝಾರ್, ಚಪ್ಪಲ ಬಝಾರ್, ಹೋಳಿ ಕಟ್ಟಾ, ಮಕ್ತಂಪೂರ್, ಸಂದಾಲ ಗಲ್ಲಿ, ಚಟ್ಟೆವಾಡಿ, ಹೊಸ ಡಂಕಾ, ಸಂತ್ರಾಸ್ವಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಗಾಜಿಪೂರ ಫೀಡರ್ :
ಅತ್ತರ ಕಂಪೌಂಡ, ಗಾಜಿಪೂರ, ಚಕ್ಕರ ಕಟ್ಟಾ ಸೂಪರ್ ಮಾರ್ಕೇಟ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ಮಿಲನ್ ಚೌಕ್ ಫೀಡರ್ :
ಮಿಲನ್ ಚೌಕ್, ಮಟನ್ ಮಾರ್ಕೇಟ್ ಮೆಹೆಬಸ್ ಏರಿಯಾ, ಗಾಜಿಪೂರ್ ಬಸವಣ್ಣ ದೇವಸ್ಥಾನ, ಸರಸ್ವತಿ ಗೋದಾಮ್, ಜಗತ್ ಪೋಸ್ಟ ಆಫೀಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು..
ಬಿ.ಎಸ್.ಎನ್.ಎಲ್. ಫೀಡರ್ :
ಸೂಪರ್ ಮಾರ್ಕೇಟ್, ಸಿಟಿ ಬಸ್ ನಿಲ್ದಾಣ, ಚೌಪಟ್ಟಿ ಕಲಬುರಗಿ ಕೋಟೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ಲಾಲ್ ಗೀರಿ ಫೀಡರ್ :
ಲಾಲ್ಗೀರಿ ಕ್ರಾಸ್, ಜನತಾ ಲೇಔಟ್, ಕೈಲಾಸ್ ನಗರ, ಕಾಳೆ ಲೇಔಟ್, ಅಗ್ನಿ ಶಾಮಕ ಠಾಣೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ಕಿರಣಾ ಬಝಾರ್ ಫೀಡರ್ :
ಕಿರಾಣಾ ಬಝಾರ್, ಮಾರವಾಡಿ ಗಲ್ಲಿ, ಖಟಗಪುರ, ಕೋಟೆ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.