Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕಲಬುರಗಿ
  4. ಕಲಬುರಗಿ | ಅವಘಡದಿಂದ ಪಾರಾಗಲು...

ಕಲಬುರಗಿ | ಅವಘಡದಿಂದ ಪಾರಾಗಲು ಮುಂಜಾಗೃತೆ ಅವಶ್ಯಕ : ಶೇಖ್ ಇಮಾಮ್

ವಾರ್ತಾಭಾರತಿವಾರ್ತಾಭಾರತಿ19 April 2025 10:20 PM IST
share
ಕಲಬುರಗಿ | ಅವಘಡದಿಂದ ಪಾರಾಗಲು ಮುಂಜಾಗೃತೆ ಅವಶ್ಯಕ : ಶೇಖ್ ಇಮಾಮ್

ಕಲಬುರಗಿ : ಅಗ್ನಿ, ಜಲ, ವಿದ್ಯುತ್, ನೈಸರ್ಗಿಕ ಅವಘಡಗಳಿಂದ ಪಾರಾಗಲು ಮುಂಜಾಗೃತೆ ಅವಶ್ಯಕವಾಗಿದೆ ಎಂದು ಸ್ಥಳೀಯ ಅಗ್ನಿಶಾಮಕ ಠಾಣೆಯ ಶೇಖ್ ಇಮಾಮ್ ಅಲಿ ಹೇಳಿದರು.

ಆಳಂದ ಪಟ್ಟಣದ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಹಾಗೂ ಎಸ್‌ಆರ್‌ಜಿ ಫೌಂಡೇಶನ್‌ನ ಶಾಲಾ ಕಾಲೇಜುಗಳ ಮುಖ್ಯ ಆವರಣದಲ್ಲಿ ಅಗ್ನಿಶಾಮಕ ಇಲಾಖೆ ವತಿಯಿಂದ ಅಗ್ನಿ ಶಾಮಕ ಸಪ್ತಾಹದ ಅಂಗವಾಗಿ ಜರುಗಿದ ಅಣುಕು ಪ್ರದರ್ಶನದಲ್ಲಿ ಇಲಾಖೆಯ ವತಿಯಿಂದ ಲಭ್ಯವಿರುವ ಸೇವೆಗಳು ಮತ್ತು ಇತರೆ ವಿಷಯಗಳ ಕುರಿತು ಮಾಹಿತಿ ನೀಡಿ ಮಾತನಾಡಿದರು.

ಅಗ್ನಿ ಅವಘಡಗಳು ಸಂಭವಿಸಲು ಸಾರ್ವಜನಿಕರ ಕೆಲವೊಂದು ನಿರ್ಲಕ್ಷ್ಯಗಳು ಕಾರಣವಾಗಿವೆ ಎಂಬುದನ್ನು ನಾವು ಗಮನಿಸಬಹುದಾಗಿದೆ. ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಅಗ್ನಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಗ್ನಿಶಾಮಕ ಇಲಾಖೆಯಿಂದ ಮಾಹಿತಿ, ತರಬೇತಿಯನ್ನು ಪಡೆದುಕೊಳ್ಳಬೇಕು ಎಂದರು.

ಅಗ್ನಿ ಅವಘಡಗಳ ಸಂದರ್ಭದಲ್ಲಿ ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿದ್ದು, ತುರ್ತು ಸಂದರ್ಭದಲ್ಲಿ 112, 108, ಹತ್ತಿರದ ಅಗ್ನಿಶಾಮಕ ಠಾಣೆ, ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಬೇಕು. ಅಗ್ನಿ ಅವಘಡಗಳಲ್ಲಿ ಬೆಂಕಿಗಿಂತಲೂ ಹೊಗೆಯೇ ಹೆಚ್ಚು ಅಪಾಯಕಾರಿಯಾಗಿದ್ದು, ಹೊಗೆಯಿಂದಲೇ ಜನರು ಬೇಗ ಉಸಿರುಗಟ್ಟಿ ಸಾಯುವ ಸಂಭವ ಹೆಚ್ಚಿರುತ್ತದೆ. ಬೆಂಕಿ ಆಕಸ್ಮಿಕ ಸಮಯದಲ್ಲಿ ಎಚ್ಚರಿಕೆಯ ಕರೆ ಗಂಟೆಯನ್ನು ಬಾರಿಸಲು ಮುಂದಾಗಬೇಕು ಎಂದು ಹೇಳಿದರು.

ಬೆಂಕಿ ಹೊತ್ತಿಕೊಂಡಾಗ ಕಟ್ಟಡದಿಂದ ಹೊರಬರಲು ಹತ್ತಿರದಲ್ಲಿರುವ ನಿರ್ಗಮನ ದಾರಿಯನ್ನು ಬಳಸಬೇಕು. ಕಟ್ಟಡದಿಂದ ಹೊರಬರಲು ಇರುವ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡುವಂತಿರಬಾರದು. ಭಯದಿಂದ ಓಡದೇ ಶಾಂತಿಯಿಂದ ವೇಗ ನಡಿಗೆಯಲ್ಲಿ ಹೊರ ಬರಲು ಯತ್ನಿಸಬೇಕು. ತುರ್ತು ಸಂದರ್ಭಗಳಲ್ಲಿ ಮೆಟ್ಟಿಲುಗಳನ್ನು ಬಳಸಬೇಕೆ ಹೊರತು, ಲಿಫ್ಟ್ ಗಳನ್ನು ಉಪಯೋಗಿಸಬಾರದು. ತುರ್ತು ಸಂದರ್ಭಗಳಲ್ಲಿ ಸುಗಮವಾಗಿ ಹೊರ ಹೋಗುವ ನಿರ್ಗಮನ ಹಾದಿಯನ್ನು ಮುಚ್ಚಿಡಬಾರದು. ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಉರಿಯುವ ವಸ್ತುಗಳನ್ನು ಶೇಖರಣೆ ಮಾಡಬಾರದು. ಅಗ್ನಿನಂದಕಗಳನ್ನು ಸುಸ್ಥಿತಿಯಲ್ಲಿಡಬೇಕು, ಅಲ್ಲದೆ ಉಪಯೋಗಿಸುವ ರೀತಿಯನ್ನು ತಿಳಿದುಕೊಂಡಿರಬೇಕು ಎಂದರು.

ಅಡುಗೆ ಅನಿಲ ಗ್ಯಾಸ್ ವಿತರಕರಿಂದ ಗ್ಯಾಸ್ ಸಿಲಿಂಡರ್ ಪಡೆಯುವಾಗ ವಾಷರ್ ಇರುವುದರ ಬಗ್ಗೆ ಖಚಿತ ಪಡೆಸಿಕೊಳ್ಳಬೇಕು. ಸಿಲಿಂಡರನ ಅವಧಿಯನ್ನು ಪರಿಶೀಲಿಸಿ ಪಡೆದುಕೊಳ್ಳಬೇಕು. ಸ್ಟೌವನ್ನು ನೆಲದ ಮೇಲೆ ಇಟ್ಟು ಅಡುಗೆ ಮಾಡಬಾರದು, ಉತ್ತಮವಾದ ಗಾಳಿ ಬೆಳಕು ಇರುವ ಕಡೆ ಸಿಲಿಂಡರ್ ಬಳಸಬೇಕು. ಸುಲಭವಾಗಿ ಬೆಂಕಿ ಹತ್ತುವ ಸಾಮಗ್ರಿಗಳನ್ನು ಅಡುಗೆ ಮನೆಯಲ್ಲಿ ಇಡಬಾರದು, ಸಿಲಿಂಡರ್ ಮೇಲೆ ಬಿಸಿ ನೀರನ್ನು ಹಾಕಬಾರದು, ಸಿಲಿಂಡರ್‌ನ್ನು ಓರೆಯಾಗಿ ಅಥವಾ ತಲೆ ಕೆಳ ಮಾಡಿ ಇಡಬಾರದು. ಪ್ರತಿ ಎರಡು ವರ್ಷಕ್ಕೊಮ್ಮೆ ರೆಗ್ಯುಲೇಟರಗೆ ಬಳಸುವ ಹೋಸ್ ಪೈಪ್ ತಪ್ಪದೆ ಬದಲಾಯಿಸಬೇಕು. ಮನೆಯಿಂದ ಆಚೆ ಅಥವಾ ಊರಿಗೆ ಹೋಗುವ ಸಂದರ್ಭಗಳಲ್ಲಿ ರೆಗ್ಯುಲೇಟರ್ ಆಫ್ ಮಾಡಿಯೇ ತೆರಳಬೇಕು. ಗ್ಯಾಸ್ ಗೀಸರ್ ಬಳಸುವವರು, ಸ್ನಾನಕ್ಕೆ ಬೇಕಿರುವ ಬಿಸಿ ನೀರು ಸಂಗ್ರಹಿಸಿದ ಬಳಿಕವೇ ಬಾತ್‌ರೂಂ ಬಾಗಿಲು ಹಾಕಿಕೊಳ್ಳಬೇಕು, ಅಲ್ಲದೆ ಬಾತ್‌ರೂಂನಲ್ಲಿ ಸಾಕಷ್ಟು ಗಾಳಿಯಾಡುವಂತೆ ಕಿಟಕಿ ವ್ಯವಸ್ಥೆ ಮಾಡಿಕೊಂಡಿರಬೇಕು ಎಂದರು.

ಅಗ್ನಿಶಾಮಕ ಇಲಾಖೆ ಏರ್ಪಡಿಸಿದ ಅಣುಕು ಪ್ರದರ್ಶನ ಕಾರ್ಯದಲ್ಲಿ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

ಎಸ್ ಆರ್ ಜಿ ಆಂಗ್ಲ್ ಮಾಧ್ಯಮ ಶಾಲೆ, ಎಂಎಆರ್‌ಜಿ ಪಿಯು ಕಾಲೇಜು, ವಿಕೆಜಿ ಪದವಿ ಕಾಲೇಜು ಮತ್ತು ರಾಜಶೇಖರ ಸ್ವಾಮೀಜಿ, ಬಿ.ಎಡ್ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X